ಭಾರತದ ʻಕಾಳು ಮೆಣಸಿನ ರಾಣಿʼಯ ಸಾಹಸ ಗಾಥೆಯನ್ನೊಮ್ಮೆ ಕೇಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯ ದಡದಲ್ಲಿ ತನ್ನ ರಾಜ್ಯವನ್ನು ಆಳುತ್ತಿದ್ದ ರಾಣಿ ಚೆನ್ನಭೈರಾದೇವಿ ತನ್ನ ಸಾಮಾಜ್ರ್ಯಕ್ಕೆ ಅತ್ಯಂತ ನಿಷ್ಠಾವಂತಳಾಗಿದ್ದಳು. ಈ ರಾಣಿಯ ಬಗ್ಗೆ ತಿಳಿಯಬೇಕೆಂದರೆ 1591 CE ಪೋರ್ಚುಗೀಸ್ ದಾಖಲೆಯನ್ನು ಓದಿದರೆ ತಿಳಿಯುತ್ತದೆ. ತನ್ನ ಆಳ್ವಿಕೆಯಲ್ಲಿ, ರಾಣಿಯು ಬಂದರುಗಳು ಮತ್ತು ವ್ಯಾಪಾರ ಚಟುವಟಿಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದ ಪೋರ್ಚುಗಲ್‌ನ ವ್ಯಾಪಾರಿಗಳ ಪ್ರಗತಿಯನ್ನು ವಿರೋಧಿಸಬೇಕಾಗಿತ್ತು ಅದಕ್ಕಾಗಿ ಕೆಳದಿ ಸಾಮ್ರಾಜ್ಯ ಮತ್ತು ಆ ಪ್ರದೇಶದಲ್ಲಿನ ಮುಖ್ಯಸ್ಥರೊಂದಿಗೆ ಜಾಣ್ಮೆಯಿಂದ ವ್ಯವಹರಿಸಿದರು.

ಡೆಕ್ಕನ್‌ನಲ್ಲಿನ ಬಿಜಾಪುರದ ರಾಜ ಆದಿಲ್‌ಷಾ ಅವರ ಸಹಾಯವನ್ನು ಕೋರಿದ ರಾಣಿ 1559 ರಲ್ಲಿ ಮತ್ತು 1570 ರಲ್ಲಿ ಮತ್ತೆ ವ್ಯಾಪಾರ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸುವ ಪೋರ್ಚುಗೀಸರ ಪ್ರಯತ್ನವನ್ನು ವಿಫಲಗೊಳಿಸಿದರು. ಚೆನ್ನಭೈರಾದೇವಿಯು ಸಾಳುವ ರಾಜವಂಶಕ್ಕೆ ಸೇರಿದವಳು ಮತ್ತು 1552 ರಿಂದ 1606 CE ನಡುವೆ 54 ವರ್ಷಗಳ ಕಾಲ ಆಡಳಿತ ನಡೆಸಿದರು. ಪೋರ್ಚುಗೀಸರು ಆಕೆಯನ್ನು ರೈನಾ-ಡಾ-ಪಿಮೆಂಟಾ ಎಂದು ಕರೆಯುತ್ತಾರೆ, ಅಂದರೆ ‘ಪೆಪ್ಪರ್ ಕ್ವೀನ್'(ಕಾಳು ಮೆನಸಿನ ರಾಣಿ) ಎಂದರ್ಥ.

ಆಕೆಯ ಅಧಿಕಾರದ ಸ್ಥಾನವಾದ ಗೆರುಸೊಪ್ಪೆ 14 ನೇ ಮತ್ತು 15 ನೇ ಶತಮಾನದ CE ನಡುವೆ ಸಾಳುವಾ ರಾಜವಂಶದ ರಾಜಧಾನಿಯಾಗಿತ್ತು. ರಾಜಧಾನಿಯು ದೀರ್ಘಕಾಲದವರೆಗೆ ವ್ಯಾಪಾರ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬಂದಿತು. ಆಕೆಯ ರಾಜ್ಯವು ಗೋವಾದ ದಕ್ಷಿಣದಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಭಟ್ಕಳ, ಮಲ್ಪೆ, ಹೊನ್ನಾವರ, ಬಿದ್ನೂರು, ಮಿರ್ಜಾನ್, ಅಂಕೋಲಾ ಮತ್ತು ಕಾರವಾರವನ್ನು ಒಳಗೊಂಡಿರುವ ಮಲಬಾರ್‌ಗೆ ವಿಸ್ತರಿಸಿದೆ ಎಂದು ಶಾಸನಗಳು ಹೇಳುತ್ತವೆ. ಆಕೆ ಹೆಸರಿನಲ್ಲಿ ಮುದ್ರಿಸಿದ ತಾಮ್ರದ ನಾಣ್ಯಗಳು ಸಹ ಕಂಡುಬಂದಿವೆ.

ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯಲ್ಲಿ ಹೊನ್ನಾವರ ಮತ್ತು ಭಟ್ಕಳದಂತಹ ಸ್ಥಳಗಳು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವ್ಯಾಪಾರ ಕೇಂದ್ರಗಳಾಗಿ ಪ್ರವರ್ಧಮಾನಕ್ಕೆ ಬಂದವು. ಮೆಣಸು, ವೀಳ್ಯದೆಲೆ ಮತ್ತು ಜಾಯಿಕಾಯಿಯಂತಹ ವಸ್ತುಗಳನ್ನು ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಜೈನ ಧರ್ಮದ ಅನುಯಾಯಿಯಾಗಿದ್ದ ಈ ರಾಣಿ 1562 ರಲ್ಲಿ ಕಾರ್ಕಳದಲ್ಲಿರುವ ಜೈನ ದೇವಾಲಯವಾದ ಚತುರ್ಮುಖ ಬಸದಿಯನ್ನು ನಿರ್ಮಿಸಲು ಆದೇಶ ನೀಡಿದರು. ಈ ಪ್ರದೇಶದಲ್ಲಿ ಶೈವ, ವೈಷ್ಣವ ಮತ್ತು ಶಕ್ತಿ ದೇವಾಲಯಗಳ ನಿರ್ಮಾಣಕ್ಕೆ ರಾಣಿ ಅನುದಾನ ನೀಡಿದರು.

ಕಾರವಾರದಿಂದ ಸುಮಾರು 62 ಕಿ.ಮೀ ದೂರದಲ್ಲಿರುವ ಮಿರ್ಜಾನ್ ಕೋಟೆಯು ಆಕೆಯ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಗಮನಾರ್ಹ ಕೋಟೆಯಾಗಿದೆ. ಕೋಟೆಯನ್ನು 4.1 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೇರುಸೊಪ್ಪದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ ಕೆಳದಿ ಮತ್ತು ಬಿಳಗಿ ಬಣಗಳು ರಾಣಿ ಚೆನ್ನಭೈರಾದೇವಿಯನ್ನು ಸೋಲಿಸಲು ಪೋರ್ಚುಗೀಸರ ಪಡೆ ಸೇರಿಕೊಂಡು ಗೇರುಸೊಪ್ಪಾ ಕೆಳದಿ ಸಾಮ್ರಾಜ್ಯದ ಭಾಗವಾಗಿ ಮಾಡಿಕೊಂಡರು. ರಾಣಿಯನ್ನು ಸೆರೆಮನೆಯಲ್ಲಿಸಿದರು. ಕೊನೆಗೆ ಸೆರಮನೆಯಲ್ಲಿಯೇ ರಾಣಿ ತನ್ನ ಕೊನೆಯುಸಿರೆಳೆದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!