ಅಮೃತಯಾತ್ರೆ: ಜನಸಾಮಾನ್ಯರ ಓಡಾಟವನ್ನು ರೈಲ್ವೆ ಸುಲಭವಾಗಿಸಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಕೊಳ್ಳುತ್ತಿರುವ ಸಂದರ್ಭದಲ್ಲಿ ದೇಶದಲ್ಲಾದ ರೇಲ್ವೇ ಕ್ರಾಂತಿಯ ಬಗ್ಗೆಯೂ ನೀವು ತಿಳಿದುಕೊಳ್ಳಲೇಬೇಕು. ರೈಲ್ವೆ ವ್ಯವಸ್ಥೆಯನ್ನು ಬ್ರೀಟೀಷರು ಮೊದಲು ದೇಶದಲ್ಲಿ ಜಾರಿಗೊಳಿಸಿದರು ಎಂಬುದು ಒಪ್ಪಿಕೊಳ್ಳಬೇಕಾದ ಅಂಶವಾಗಿದ್ದರೂ, ಸ್ವಾತಂತ್ರ್ಯ ನಂತರದಲ್ಲಿ ಅದನ್ನು ವಿಕಸಿತಗೊಳಿಸಿ ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಯ ಸಾಧನವನ್ನಾಗಿಸಿಕೊಳ್ಳಲಾಗಿದೆ. ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆ ವ್ಯವಸ್ಥೆಗೆ ವಿಶಿಷ್ಟ ಸ್ಥಾನವಿದ್ದು ಜನಸಾಮಾನ್ಯನ ನೆಚ್ಚಿನ ಸಾರಿಗೆಯಾಗಿ ಹೊರಹೊಮ್ಮಿದೆ.

ರೈಲ್ವೆ ದೇಶದಲ್ಲಿ ಬೆಳವಣಿಗೆಯಾದ ಬಗೆಯನ್ನು ನೋಡುವುದಾದರೆ, 1950-51ರಲ್ಲಿ 1284 ಮಿಲಿಯನ್‌ ಪ್ರಯಾಣಿಕರು ರೈಲ್ವೆಯನ್ನು ಬಳಸಿ ಓಡಾಡಿದ್ದರು. ನಂತರದಲ್ಲಿ ತೆಗೆದುಕೊಂಡ ವ್ಯಾಪಕ ಅಭಿವೃದ್ಧಿ ಕಾರ್ಯಗಳು ಪ್ರಯಾಣಿಕರ ಸಂಖ್ಯೆಯನ್ನು ಏರಿಸಿತು. ರೈಲ್ವೆ ಜಾಲವು ಇಂದು ಕಾಶ್ಮೀರದ ಕಣಿವೆಯಿಂದ ಕನ್ಯಾಕುಮಾರಿಯ ಕಡಲ ತೀರದ ವರೆಗೂ ವ್ಯಾಪಿಸಿದೆ. ಈಶಾನ್ಯ ರಾಜ್ಯಗಳಂತಹ ಗುಡ್ಡಗಾಡು ಪ್ರದೇಶದಲ್ಲಿಯೂ ರೈಲ್ವೆ ಕಾರ್ಯ ನಿರ್ವಹಿಸುತ್ತದೆ. ಕೊಂಕಣದ ಪಶ್ಚಿಮಘಟ್ಟಗಳ ನಡುವೆಯೂ ರೈಲ್ವೆ ಸಂಚರಿಸುತ್ತದೆ. 2019-20ರಲ್ಲಿ ಸುಮಾರು 8086 ಮಿಲಿಯನ್‌ ಜನರನ್ನು ರೈಲ್ವೆ ಹೊತ್ತೊಯ್ದಿದೆ. ವಂದೇ ಭಾರತ್‌ ನಂತಹ ದೇಶೀಯವಾಗಿ ನಿರ್ಮಿಸಿದ ರೈಲುಗಳು ಅತ್ಯಂತ ವೇಗದ ಹಾಗೂ ಐಷಾರಾಮಿ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಖ್ಯಾತಿಯೂ ಭಾರತೀಯ ರೈಲ್ವೆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!