ಆತನ ಅಪ್ಪುಗೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್:‌ ಗಂಟೆಗೆ 7ಸಾವಿರ ರೂ.!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಧುನಿಕ ಸಮಾಜದಲ್ಲಿ ಪ್ರೀತಿ, ವಾತ್ಸಲ್ಯದ ಕೊರತೆ ಹೆಚ್ಚಾಗಿದೆ. ಕೆಲವರಿಗೆ ಎಲ್ಲರೂ ಇದ್ದು, ಅನಾಥರಂತೆ ಇನ್ನೂ ಕೆಲವರು ಸದಾ ಒಂಟಿತನ ಬಯಸುತ್ತಾರೆ. ಮಾನಸಿಕವಾಗಿ ಕುಗ್ಗಿ, ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳದೇ ನರಕಯಾತನೆ ಅನುಭವಿಸುತ್ತಾರೆ. ಭಾರತದಲ್ಲಿ ಇಂಹತ ಜನರ ಸಂಖ್ಯೆ ಕಡಿಮೆಯಿದ್ದರೂ, ಹೊರ ದೇಶಗಳಲ್ಲಿ ಇವರ ಸಂಖ್ಯೆ ಹೆಚ್ಚು. ಅಂತಹವರಿಗೆ ನಾನಿದ್ದೇನೆ ಎಂದು ಧೈರ್ಯ ತುಂಬು ಕೆಲಸಕ್ಕೆ ಕೈ ಹಾಕಿದ್ದಾನೆ ಟ್ರೆಜರ್‌ ಎಂಬ ವ್ಯಕ್ತಿ.

Hugh

ಇಂಗ್ಲೆಂಡ್‌ನಲ್ಲಿನ ಬ್ರಿಸ್ಟಲ್‌ನಲ್ಲಿ ವಾಸ ಮಾಡುವ 30 ವರ್ಷದ ಟ್ರೆಜರ್, ಅಪ್ಪಿಕೊಳ್ಳುವುದನ್ನು ಉದ್ಯಮವಾಗಿ ಪರಿವರ್ತಿಸಿದ್ದಾರೆ. ಖಜಾಂಚಿ ರೋಬೋಟಿಕ್ಸ್‌ನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರ್ ಪದವಿ ಪಡೆದಿದ್ದು, ಉತ್ಪನ್ನ ಮತ್ತು ಕ್ಲೈಂಟ್ ಮ್ಯಾನೇಜರ್ ಆಗಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ವೃತ್ತಿ ಬದುಕಿನಲ್ಲಿ ತೃಪ್ತಿ ಹೊಂದದ ಆತ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಏಕಾಂಗಿಯಾಗಿರುವವರಿಗೆ ಸಂತೋಷವನ್ನು ಕೊಡುವ ಉದ್ದೇಶವನ್ನು ಹೊಂದಿದ್ದಾನೆ. ಅದನ್ನು ತಾನು ಮಾಡಬೇಕೆಂದು ಅಪ್ಪುಗೆಯ ಮೂಲಕ ಒಂದು ಗಂಟೆ ಅವರನ್ನು ಅಪ್ಪಿಕೊಂಡು ಅವರ ಮನಸ್ಸು ನಿರಾಳವಾದರೆ ಗಂಟೆಗೆ 75 ಪೌಂಡ್ (ಭಾರತೀಯ ಕರೆನ್ಸಿಯಲ್ಲಿ ರೂ. 7 ಸಾವಿರ) ಚಾರ್ಜ್‌ ಮಾಡುತ್ತಾನೆ. ಸದ್ಯ ಅದನ್ನೇ ವೃತ್ತಿಯನ್ನಾಗಿ ಆರಿಸಿಕೊಂಡ ಆತ ವೃತ್ತಿಪರ ಕಡ್ಲ್ ಥೆರಪಿಯಾಗಿ ಬದಲಾಯಿಸಿದ್ದಾರೆ.

Cuddle Therapy11

ಒಂಟಿತನ ಅನುಭವಿಸುವವರು ಆತನನ್ನು ಸಂಪರ್ಕಿಸಿದರೆ ಅವರ ಮನೆಗೆ ಬಂದು ಪ್ರೀತಿಯ ಅಪ್ಪುಗೆಯನ್ನು ನೀಡುತ್ತಾನೆ. ತಲೆ ನೇವರಿಸುತ್ತಾ ಅವರ ಒಂಟಿತನ, ನಿಸ್ಸಾಯಕತೆ ಎಲ್ಲವನ್ನೂ ಹೋಗಲಾಡಿಸುತ್ತಾನೆ. ಯುವಕರಿಂದ ಹಿಡಿದು ವೃದ್ಧರು, ಪುರುಷರು ಮತ್ತು ಮಹಿಳೆಯರೆನ್ನದ ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುತ್ತಾನೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!