ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ವರ್ಷದ ಜೂನ್ ತಿಂಗಳಲ್ಲಿ ಪ್ರತಿ ಲೀಟರಿಗೆ 2 ರೂ. ಹೆಚ್ಚಿಸಲಾಗಿತ್ತು. ಇದೀಗ ನಂದಿನಿ ಹಾಲಿನ ಉತ್ಪನ್ನಗಳ ದರ ಮತ್ತೊಮ್ಮೆ ಪರಿಷ್ಕರಿಸಲು ನಿರ್ಧರಿಸಿದೆ. ಹಾಲಿನ ದರವನ್ನ ಹೆಚ್ಚಿಸುವ ಬಗ್ಗೆ ಖುದ್ದು ಸಿಎಂ ಅವರೇ ಸುಳಿವು ನೀಡಿದ್ದು ಮಧ್ಯಮ ವರ್ಗಕ್ಕೆ ಬಿಸಿ ತಟ್ಟುವ ಎಲ್ಲಾ ಸಾಧ್ಯತೆಗಳಿವೆ.
ನಂದಿನ ಹಾಲಿನ ದರ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇದೇ ಜೂನ್ ತಿಂಗಳಲ್ಲಿ ಹಾಲಿನ ದರವನ್ನು 2 ರೂ.ಗಳಿಗೆ ಸರ್ಕಾರ ಹೆಚ್ಚಳ ಮಾಡಿತ್ತು. ಅಲ್ಲಿಗೆ, ಪ್ರತಿ 1 ಲೀಟರ್ ಹಾಲಿನ ಬೆಲೆ 22 ರೂ.ಗಳಿಂದ 24 ರೂ.ಗಳಿಗೆ ಹೆಚ್ಚಾಗಿತ್ತು. ಆಗ ವ್ಯಾಪಾರಿ ಜಾಣ್ಮೆ ಪ್ರದರ್ಶನ ಮಾಡಿದ್ದ ಸರ್ಕಾರ, ಲೀಟರ್ ಪ್ಯಾಕ್ ಮೇಲೆ 50 ಮಿ.ಲೀಟರ್ ಹೆಚ್ಚುವರಿ ನೀಡಿ 2 ರೂ. ಹೇರಿಕೆ ಮಾಡಿತ್ತು.
ಇದೀಗ ದರ ಹೆಚ್ಚಳಕ್ಕೆ ಜನರು ಹೇಗೆ ರಿಯಾಕ್ಟ್ ಮಾಡ್ತಾರೋ ಅಥವಾ ಸರ್ಕಾರ ಪಕ್ಕಾ ದರ ಹೆಚ್ಚ