ಯುರೋಪ್ ಗೆ ಶಾಖದಲೆಗಳ ಶಾಕ್: ಚಳಿಗಾಲವಿದ್ರೂ ಇಲ್ಲ ಹಿಮದ ಹೊದಿಕೆ, ಸ್ಕೀ ರೆಸಾರ್ಟ್‌ಗಳು ಬಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ನೋ ಫಾಲ್‌ ನಿಂದ ಹೊಸ ವರ್ಷವನ್ನು ಸಂತಸದಿಂದ ಸ್ವಾಗತಿಸಬೇಕಿದ್ದ ಯುರೋಪಿನ ದೇಶಗಳು ಶಾಖದಲೆಗಳ ಹೊಡೆತಕ್ಕೆ ಸಿಲುಕಿ ಕಳೆಗುಂದಿವೆ. ಚಳಿಗಾಲದಲ್ಲಿ ಐತಿಹಾಸಿಕ ಗರಿಷ್ಟಮಟ್ಟದ ತಾಪಮಾನ ದಾಖಲಾಗಿದ್ದು ಹೊಸ ವರ್ಷದ ವಾರಾಂತ್ಯದಲ್ಲಿ ಮನೆಮಾಡಬೇಕಿದ್ದ ಸಂಭ್ರಮದ ವಾತಾವರಣ ಕಳೆದುಹೋಗಿದೆ. ಚಳಿಗಾಲದಲ್ಲಿ ಹಿಮಪಾತದಿಂದ ತುಂಬಿ ತುಳುಕ ಬೇಕಿದ್ದ ಸ್ಕೀಯಿಂಗ್‌ ರೆಸಾರ್ಟಗಳು ಹಿಮವಿಲ್ಲದ ಪರಿಣಾಮ ಮುಚ್ಚಲ್ಪಟ್ಟಿವೆ.

ಯುರೋಪಿನ ಹಲವು ದೇಶಗಳಲ್ಲಿ ಜನವರಿ ತಿಂಗಳ ತಾಪಮಾನವು ದಾಖಲೆಯ ಗರಿಷ್ಟ ಮಟ್ಟವನ್ನು ತಲುಪಿವೆ. ಕನಿಷ್ಠ ಏಳು ದೇಶಗಳಲ್ಲಿ ತಾಪಮಾನವು ಸಾರ್ವಕಾಲಿಕ ಗರಿಷ್ಟ ಮಟ್ಟವನ್ನು ದಾಖಲಿಸಿದೆ.

ಪೋಲಿಷ್ ರಾಜಧಾನಿ ವಾರ್ಸಾ ಜನವರಿ 1 ರಂದು 18.9 ಡಿಗ್ರಿ ಸೆಲ್ಸಿಯಸ್ (66 ಡಿಗ್ರಿ ಫ್ಯಾರನ್‌ಹೀಟ್) ತಾಪಮಾನವನ್ನು ದಾಖಲಿಸಿದೆ. ಉತ್ತರ ಸ್ಪ್ಯಾನಿಷ್ ನಗರ ಬಿಲ್ಬಾವೊ ಹೊಸ ವರ್ಷದ ದಿನದಂದು 24.9 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದ್ದರೆ ಸ್ವಿಟ್ಜರ್ಲೆಂಡ್ ಭಾನುವಾರ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡಿದೆ. ಬೆಚ್ಚಗಿನ ಹವಾಮಾನದ ಪರಿಣಾಮದಿಂದ ಕಡಿಮೆ ಹಿಮಪಾತವುಂಟಾಗಿದ್ದು ಹಲವಾರು ಸ್ಕೀಯಿಂಗ್‌ ರೆಸಾರ್ಟ್‌ಗಳು ಮುಚ್ಚಲ್ಪಟ್ಟಿವೆ.

ನೆದರ್ಲ್ಯಾಂಡ್ಸ್, ಡೆನ್ಮಾರ್ಕ್, ಪೋಲೆಂಡ್, ಜೆಕ್ ರಿಪಬ್ಲಿಕ್, ಬೆಲಾರಸ್, ಲಾಟ್ವಿಯಾ ಮತ್ತು ಲಿಥುವೇನಿಯಾ ದೇಶಗಳು ಐತಿಹಾಸಿಕ ಗರಿಷ್ಟ ತಾಪಮಾನ ದಾಖಲಿಸಿದ್ದರೆ ಫ್ರಾನ್ಸ್, ಜರ್ಮನಿ ಮತ್ತು ಉಕ್ರೇನ್‌ನಲ್ಲಿ ಪ್ರಾದೇಶಿಕ ದಾಖಲೆಗಳಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!