Tuesday, March 28, 2023

Latest Posts

SHOCKING| ತಿರುಪತಿಯಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟ: 30 ಅಡಿ ಮೇಲಕ್ಕೆ ಚಿಮ್ಮಿದ ಮಣ್ಣು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಪತಿ ಜಿಲ್ಲೆಯ ನಾಯ್ಡುಪೇಟೆ ಮಂಡಲದ ಮೇಣಕೂರು ಎಸ್‌ಇಜೆಡ್ ಬಳಿ ಭಾರಿ ಅಪಘಾತ ಸಂಭವಿಸಿದೆ. ಕೇಂದ್ರ ಸರ್ಕಾರ ಆರಂಭಿಸಿರುವ ಮನೆ ಬಾಗಿಲಿಗೆ ಗ್ಯಾಸ್ ಪೂರೈಕೆ ಸಂಬಂಧಿಸಿದಂತೆ ಖಾಸಗಿ ಗ್ಯಾಸ್ ಏಜೆನ್ಸಿಯೊಂದು ಕೈಗೆತ್ತಿಕೊಂಡಿದ್ದ ಗ್ಯಾಸ್ ಪೈಪ್ ಲೈನ್ ನಲ್ಲಿ ಸ್ಫೋಟ ಸಂಭವಿಸಿದೆ. ಕಲ್ಲುಗಳು ಮತ್ತು ಮಣ್ಣು 35 ಅಡಿ ಮೇಲಕ್ಕೆ ಚಿಮ್ಮಿದೆ.

ಭಾರೀ ಸದ್ದಿನೊಂದಿಗೆ ಮಣ್ಣಿನ ಕಲ್ಲುಗಳು ಸುಮಾರು 35 ಅಡಿ ಎತ್ತರಕ್ಕೆ ಹಾರಿ ಸುಮಾರು 5 ಅಡಿ ಆಳದ ಹೊಂಡ ನಿರ್ಮಾಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಾತ್ರಿಯ ಸಮಯವಾದ್ದರಿಂದ ಆಸುಪಾಸಿನಲ್ಲಿ ಜನ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಆದರೆ, ಸಮೀಪದ ಟೆರೇಸ್‌ನಲ್ಲಿದ್ದ ಕೆಲವರು ಭಯದಿಂದ ಓಡಿಹೋದರು.

ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಅನಾಹುತ ತಪ್ಪಿದೆ. ಕಳೆದ ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಬಳಿಯ ಉಜಿಲಿಯಲ್ಲಿ ಮೇಣಕೂರು ಕೈಗಾರಿಕಾ ವಾಡದ ಬಳಿ ಪೈಪ್ ಲೈನ್ ನಿರ್ಮಿಸುತ್ತಿರುವ ಕಂಪನಿ ವಿರುದ್ಧ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುರಸ್ತಿಗೆ ಯತ್ನಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!