ಟರ್ಕಿ-ಸಿರಿಯಾ ರೀತಿ ಭಾರತದಲ್ಲೂ ಭೂಕಂಪ? ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿರ್ಕಿ-ಸಿರಿಯಾ ಭೂಕಂಪದ ಭೀಕರತೆ ದಿನೇ ದಿನೆ ಹೆಚ್ಚುತ್ತಿದೆ, ಇದೀಗ ಭಾರತೀಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದ್ದು, ಭಾರತಕ್ಕೂ ಭೂಕಂಪದ ಭೀತಿ ಎದುರಾಗಿದೆ.

ಈ ಬಗ್ಗೆ ಐಐಟಿ ಕಾನ್ಪುರ್‌ನ ಭೂವಿಜ್ಞಾನಿ ಜಾವೇದ್ ಮಲಿಕ್ ಮಾಹಿತಿ ನೀಡಿದ್ದು, ಭಾರತಕ್ಕೆ ಭೂಕಂಪದ ಅಪಾಯವಿದೆ, ಭೂಕಂಪನವಾದರೆ ಹೆಚ್ಚು ಹಾನಿಯಾಗೋದು ಹಿಮಾಚಲ ಪ್ರದೇಶಕ್ಕೆ ಎಂದು ಹೇಳಿದ್ದಾರೆ.

ದೇಶದಲ್ಲಿ ಈಗಾಗಲೇ ಸಂಭವಿಸಿರುವ ಭೂಕಂಪಗಳು, ಭೂಮಿಯ ಚಲನವಲನ ಹಾಗೂ ಪರಿಣಾಮಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ಜಾವೇದ್, ಟರ್ಕಿ-ಸಿರಿಯಾದಷ್ಟು ತೀವ್ರತೆಯ ಭೂಕಂಪ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.

ದೇಶದ ಕೆಲ ಪ್ರದೇಶದಲ್ಲಿ ಮುಂದಿನ ಒಂದು ಅಥವಾ ಎರಡು ದಶಕಗಳಲ್ಲಿ 7.5 ಕ್ಕಿಂತಲೂ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಬಹುದು ಎನ್ನಲಾಗಿದೆ. ಅಂಡಮಾನ್ ನಿಕೋಬಾರ್ ಐಲ್ಯಾಂಡ್ ಹಾಗೂ ಹಿಮಾಚಲ ಪ್ರದೇಶಕ್ಕೆ ಹಾನಿ ಹೆಚ್ಚು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!