Monday, August 8, 2022

Latest Posts

ಶ್ರೀನಗರ – ಲೇಹ್ ಹೆದ್ದಾರಿಯಲ್ಲಿ ಭಾರೀ ಕುಸಿತ: ಸಂಚಾರ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮು & ಕಾಶ್ಮೀರ ಕಲ್ಗುಂದ ಪ್ರದೇಶದಲ್ಲಿ ಮಣ್ಣು ಕುಸಿದಿದೆ. ಪರಿಣಾಮ ಶ್ರೀನಗರ – ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ರಸ್ತೆಯಲ್ಲೇ ಸಿಲುಕಿವೆ.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಅಧೀಕೃತ ಮಾಹಿತಿ ಪಡೆಯದೇ ಜನರು ಪ್ರಯಾಣಿಸದಂತೆ ಸೂಚಿಸಲಾಗಿದೆ. ಜಮ್ಮುವಿನಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಅಮರನಾಥ ಯಾತ್ರೆಯ ಬೆಂಗಾವಲು ವಾಹನವನ್ನು ಹೆದ್ದಾರಿ ತಡೆಯಿಂದಾಗಿ ಚಂದರ್‌ಕೂಟ್ ಯಾತ್ರಾ ನಿವಾಸದಲ್ಲಿಯೇ ನಿಲ್ಲಿಸಲಾಗಿದೆ.
ಲಡಾಖ್ ಕಡೆಯಿಂದ ಬರುವ ವಾಹನಗಳು ಮತ್ತು ಹತ್ತಾರು ಅಮರನಾಥ ಯಾತ್ರಾರ್ಥಿಗಳು ಈ ವೇಳೆ ರಸ್ತೆಯಲ್ಲೇ ಸಿಲುಕಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸಂಚಾರ ಪೊಲೀಸರು ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ಅನ್ನು ಮತ್ತೊಮ್ಮೆ ಮುಚ್ಚಿರುವುದರಿಂದ ಜನರು ಅಲ್ಲಿ ಸಂಚರಿಸುವನ್ನು ನಿಲ್ಲಿಸಬೇಕಿದೆ ಎಂದು ಹೇಳಿದ್ದಾರೆ.
ಭಾರೀ ಮಳೆಯ ನಂತರ, ಚೆನಾಬ್ ನದಿಯಲ್ಲಿ ನೀರಿನ ಮಟ್ಟವು ಹೆಚ್ಚಾಗಿದೆ, ಇದು ಹಠಾತ್ ಪ್ರವಾಹಕ್ಕೆ ಕಾರಣವಾಯಿತು. ಜಲಮೂಲಗಳ ದಡದಿಂದ ದೂರವಿರಲು ಜನರಿಗೆ ಸೂಚಿಸಲಾಗಿದೆ.ಏತನ್ಮಧ್ಯೆ, ಜಮ್ಮು-ಶ್ರೀನಗರ ಮತ್ತು ಶ್ರೀನಗರ-ಕಾರ್ಗಿಲ್ ಹೆದ್ದಾರಿಯನ್ನು ಹಠಾತ್ ಪ್ರವಾಹದಿಂದಾಗಿ ಸಂಚಾರಕ್ಕಾಗಿ ಮುಚ್ಚಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss