ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಹಾಸನಾಂಬೆ ದರುಶನದ ವೇಳೆ ಉಂಟಾಗಿದ್ದ ವಿದ್ಯುತ್ ಅವಘಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಪ್ಪತ್ತು ಜನರ ಪೈಕಿ ಹದಿನೆಂಟು ಗಾಯಾಳುಗಳು ಡಿಸ್ಚಾರ್ಜ್ ಆಗಿದ್ದಾರೆ. ಗಂಭೀರ ಗಾಯಗೊಂಡ ಇನ್ನೂ ಇಬ್ಬರಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ವಿದ್ಯುತ್ ಶಾಕ್‌ನಿಂದಾಗಿ ಇಪ್ಪತ್ತು ಮಂದಿ ಭಕ್ತರು ಅಸ್ವಸ್ಥರಾಗಿದ್ದರು. ಅವರಲ್ಲಿ ನಿನ್ನೆ ಐವರು, ಇಂದು ಹದಿಮೂರು ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಆಸ್ಪತ್ರೆಗೆ ತೆರಳಿ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ, ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ನಿನ್ನೆ ನಡೆದ ದುರಂತದಿಂದ ಜಿಲಾಡಳಿತ ಮತ್ತಷ್ಟು ಅಲರ್ಟ್ ಆಗಿದ್ದು, ಸರತಿ ಸಾಲಿನಲ್ಲಿ ಗುಂಪು ಗುಂಪಾಗಿ ತೆರಳದಂತೆ ಭಕ್ತರಿಗೆ ಸೂಚಿಸಿದೆ.