ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಮತ್ತೊಂದು ಯೋಜನೆ ಪರಿಚಯಿಸಿದ್ದು, ಇದರಿಂದ ಗುಂಪಿನಲ್ಲಿ ಪ್ರಯಾಣಿಸುವವರಿಗೆ ಸಾಕಷ್ಟು ಅನುಕೂಲವಾಗಲಿದೆ.
ನಮ್ಮ ಮೆಟ್ರೋ ಇದೀಗ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿ ಮಾಡಿದ್ದು, ಇದೇ ನ.13ರಿಂದ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಮೊಬೈಲ್ ಕ್ಯುಆರ್ ಟಿಕೆಟ್‌ಗಳನ್ನು ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ನಮ್ಮ ಮೆಟ್ರೋ ಪೇಟಿಎಂ, ವಾಟ್ಸಾಪ್‌ನಲ್ಲಿ ಒಬ್ಬರಿಗೆ ಒಂದು ಪ್ರಯಾಣಕ್ಕಷ್ಟೇ ನೀಡಲಾಗಿತ್ತು. ಆದರೆ ಇದೀಗ ಸಾರ್ವಜನಿಕರಿಗಾಗಿ ಮೊಬೈಲ್ ಕ್ಯುಆರ್ ಗ್ರೂಪ್ ಟಿಕೆಟ್ ಜಾರಿಗೆ ಬರಲಿದೆ.
ಅನುಕೂಲಗಳೇನು?
ಇದರಿಂದ ಒಮ್ಮೆಲೆ ಆರು ಜನರ ಗುಂಪು ಪ್ರಯಾಣಿಸುವಂಥ ಟಿಕೆಟ್ ನೀಡಲಾಗುತ್ತದೆ, ಮೊಬೈಲ್ ಕ್ಯುಆರ್ ಟಿಕೆಟ್‌ಗಳು ಟೋಕನ್ ದರಕ್ಕಿಂತ ಶೇ.೫ರಷ್ಟು ರಿಯಾಯಿತಿ ಇರುತ್ತದೆ, ಪ್ರಯಾಣಿಕರ ಸಂಖ್ಯೆಗೆ ಎನ್‌ಕ್ರಿಪ್ಟ್ ಮಾಡಿದ ಕ್ಯುಆರ್ ಟಿಕೆಟ್ ಬರುತ್ತದೆ. ಇದನ್ನು ಪ್ರವೇಶ ಹಾಗೂ ನಿರ್ಗಮನದಲ್ಲಿ ಸ್ಕ್ಯಾನ್ ಮಾಡಿ ಬಳಸಬೇಕಾಗುತ್ತದೆ.