Saturday, December 2, 2023

Latest Posts

ಸಂಜೆಯ ಬಳಿಕ ಅಬ್ಬರಿಸಿದ ಜಡಿಮಳೆ: ಸಿಲಿಕಾನ್ ಸಿಟಿಗೆ ಬಂತು ಹೊಸಾ ಕಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಗೆ ಸೋಮವಾರ ಸಂಜೆಯ ಬಳಿಕ ಸುರಿದ ಮಳೆ ಹೊಸ ಕಳೆಯನ್ನು ತಂದಿಟ್ಟಿದೆ.
ಬೆಂಗಳೂರಿನ ಎಂಜಿ ರಸ್ತೆ, ಶಿವಾಜಿನಗರ, ಸಂಪಂಗಿ ರಾಮನಗರ, ಪುರಭವನ, ಕೋರಮಂಗಲ, ಬಿಟಿಎಂ, ಬನ್ನೇರುಘಟ್ಟ ರಸ್ತೆ, ಸರ್ಜಾಪುರ, ಕೆಆರ್‌ಪುರಂ, ಹೆಬ್ಬಾಳ, ಯಶವಂತಪುರ, ಬಸವನಗುಡಿ, ಮೈಸೂರು ರಸ್ತೆ, ಸಂಜಯ್‌ನಗರ, ಗಾಂಧಿನಗರ, ವಿಮಾನ ನಿಲ್ದಾಣ ರಸ್ತೆ, ಶಾಂತಿ ನಗರ, ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ರಾಜಾಜಿನಗರ, ಪೀಣ್ಯ, ನಾಗರಬಾವಿ, ಸಿವಿ ರಾಮನ್ ನಗರ ಮೊದಲಾದೆಡೆಗಳಲ್ಲಿ ಮಳೆಯಾಗಿದ್ದು, ಕೆಲವೆಡೆ ಸಹಜ ಜನಜೀವನಕ್ಕೆ ಕೆಲಕಾಲ ಅಡ್ಡಿಯಾಯಿತು.
ಸಂಜೆಯ ಬಳಿಕ ಏಕಾಏಕಿ ಕಾಣಿಸಿಕೊಂಡ ಮಳೆಯಿಂದಾಗಿ ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು ಸಂಕಷ್ಟ ಎದುರಿಸುವಂತಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!