ರಾಜ್ಯದಲ್ಲೆಲ್ಲ ಭಾರೀ ಮಳೆ, ಇನ್ನೂ ಎರಡು ದಿನ ಜೋರು ಮಳೆಯಾಗಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ನಾನಾ ಕಡೆಗಳನ್ನು ನಿನ್ನೆಯೂ ಜೋರು ಮಳೆಯಾಗಿದ್ದು, ಇನ್ನೂ ಎರಡು ದಿನ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಕಲಬುರಗಿ, ರಾಯಚೂರು, ಯಾದಗಿರಿ, ಚಿತ್ರದುರ್ಗ,ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು,ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಯಲಬುರ್ಗಾ, ಯುಗಟಿ, ತಾಳಿಕೋಟೆ, ಗದಗ, ಬಸವನ ಬಾಗೇವಾಡಿ, ಹಾವೇರಿ, ಸೋಮವಾರಪೇಟೆ, ಮಾನ್ವಿ, ಮಾಸ್ಕಿ, ಗಂಗಾವತಿ,ಶ್ರವಣಬೆಳಗೊಳ,ಗುಬ್ಬಿ,ಶ್ರೀರಂಗಪಟ್ಟಣ,ಇಳಕಲ್‌ನಲ್ಲಿಯೂ ಮಳೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!