ನಕ್ಸಲ್ ಕಮಾಂಡರ್ ಸೇರಿ ಮೂವರು ಮಾವೋವಾದಿಗಳ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಗಡ್ಜಿರೋಲಿ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದು, ನಕ್ಸಲ್ ಕಮಾಂಡರ್ ಸೇರಿದಂತೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ.

ಕೆದ್ಮಾರಾ ಅರಣ್ಯದಲ್ಲಿ ನಿನ್ನೆ ಸಂಜೆ ಏಳು ಗಂಟೆ ವೇಳೆಗೆ ಗುಂಡಿನ ಚಕಮಕಿ ಆರಂಭವಾಗಿದ್ದು, ಮೂವರು ಮಾವೋವಾದಿಗಳನ್ನು ಸೆದೆಬದಿಯಲಾಗಿದೆ.

ರಾಜಾರಾಂ ಮತ್ತು ಪೆರಿಮಿಲಿ ಸಶಸ್ತ್ರ ಹೊರಠಾಣೆ ನಡುವಿನ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಸಿ-60 ಪೊಲೀಸ್ ಪಡೆಯ ಎರಡು ತುಕಡಿಯನ್ನು ಕಳುಹಿಸಲಾಗಿತ್ತು. ಶೋಧಕಾರ್ಯದ ವೇಳೆ ನಕ್ಸಲು ಮೊದಲು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಪೊಲೀಸರು ಪ್ರತಿದಾಳಿ ಮಾಡಿದ್ದಾರೆ.

ದಾಳಿ ನಂತರ ಮೂವರು ಮಾವೋವಾದಿಗಳು ಹತರಾಗಿದ್ದಾರೆ, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರಲ್ಲಿ ಒಬ್ಬರನ್ನು ಪೆರಿಮಿಲಿ ದಳದ ಕಮಾಂಡರ್ ಬಿಟ್ಲು ಮಾದವಿ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!