ಭಾರೀ ಮಳೆ: ವಿಮಾನಗಳ ಆಗಮನ- ನಿರ್ಗಮನದಲ್ಲಿ ವ್ಯತ್ಯಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನ, ಹೈದರಾಬಾದ್‌ನಿಂದ ಮಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನ ಗುರುವಾರ ನಿಗದಿತ ಸಮಯಕ್ಕಿಂತ ತಡವಾಗಿ ಲ್ಯಾಂಡ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನ 7 ನಿಮಿಷ ತಡವಾಗಿ ಆಗಮಿಸಿದ್ದು, 25 ನಿಮಿಷ ವಿಳಂಬವಾಗಿ ಬೆಂಗಳೂರಿಗೆ ತೆರಳಿದೆ. ಕೊಲ್ಕತ್ತಾ- ಬೆಂಗಳೂರು- ಮಂಗಳೂರು ವಿಮಾನ ಗುರುವಾರ 16 ನಿಮಿಷ ತಡವಾಗಿ ಆಗಮಿಸಿದ್ದು, 50 ನಿಮಿಷ ವಿಳಂಬವಾಗಿ ವಾಪಸ್ ತೆರಳಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!