ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಜರಾತ್‌ನಲ್ಲಿ ಸತತವಾಗಿ ಆರು ಗಂಟೆ ಮಳೆ ಸುರಿದಿದ್ದು, 300 ಮಿಮೀ ದಾಖಲೆಯ ಮಳೆಯಾಗಿದೆ.
ಇದರಿಂದಾಗಿ ರಾಜ್‌ಕೋಟ್ ಜಿಲ್ಲೆಯ ಧೋರಾಜಿ ನಗರ ಮುಳುಗಡೆಯಾಗಿದ್ದು, ವಾಹನಗಳು ಸಂಪೂರ್ಣ ಜಲಾವೃತವಾಗಿವೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ.