ಹೊಸದಿಗಂತ ವರದಿ ಮಂಡ್ಯ:
ಕಳೆದ ಎರಡು ದಿನಗಳಿಂದ ಮೇಘಸ್ಪೋಟ ಉಂಟಾದ ಕಾರಣ ತಾಲೂಕಿನ ಕೆರಗೋಡು, ಹುಂಜನಕೆರೆ, ಕೀಲಾರ ಗ್ರಾಮಗಳ ಕೆರೆ ಒಡೆದು ಏಕಏಕಿ ಮದ್ದೂರು ಕೆರೆಗೆ ನೀರು ನುಗ್ಗಿದೆ. ಇದರಿಂದಾಗಿ ಮದ್ದೂರು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ಜಮೀನುಗಳು ಜಲಾವೃತವಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಸ್ಥಗಿತವಾಗಿದೆ.
ಘಟನೆಯಿಂದಾಗಿ ಮದ್ದೂರಿನ ಸೋಮೇಶ್ವರ ಸಮುದಾಯ ಭವನ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಎಲ್ಐಸಿ ಹಿಂಭಾಗದ ಬಡಾವಣೆ ಸಿದ್ದರಾಜು ಬಡಾವಣೆ ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಮದ್ದೂರು ಕೆರೆಯ ನೀರು ಏಕಾಏಕಿ ಕೊಲ್ಲಿ ನದಿ ಮೂಲಕ ಬೆಂಗಳೂರು ಮೈಸೂರು ಹೆದ್ದಾರಿಗೆ ನುಗ್ಗಿದ ಪರಿಣಾಮ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ನೀರು ಪ್ರವಾಹ ಉಪಾದಿಯಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜನತೆ ತಂದೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿರುವ ದೃಶ್ಯವನ್ನು ನೋಡುತ್ತಿದ್ದು ಸಾಮಾನ್ಯವಾಗಿತ್ತು. ಅಪಾರ ಪ್ರಮಾಣದ ನೀರು ಹೆದ್ದಾರಿಯಲ್ಲಿ ಹರಿಯುತ್ತಿರುವ ಕಾರಣ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವಾಹನಗಳ ವಾಹನಗಳನ್ನು ಬದಲಿ ವ್ಯವಸ್ಥೆ ಮಾಡಿದ್ದು, ರುದ್ರಾಕ್ಷಿ ಪುರ ಮಳವಳ್ಳಿ ಮೂಲಕ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳನ್ನು ಕೆಎಂ ದೊಡ್ಡಿ ಮಳವಳ್ಳಿ ಮಾರ್ಗವಾಗಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು.