Sunday, August 14, 2022

Latest Posts

ವಿದ್ಯಾರ್ಥಿಗಳಿಗೆ ನೋಟ್‌ ಬುಕ್‌ ವಿತರಿಸಿದ ವಿವೇಕ್‌ ಹೆಬ್ಬಾರ್

ಹೊಸದಿಗಂತ ವರದಿ ಯಲ್ಲಾಪುರ:
ಯುವನಾಯಕ ವಿವೇಕ್ ಹೆಬ್ಬಾರ್ ಅವರು ಇಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಭಾಂಗಣದಲ್ಲಿ ತಮ್ಮ ಸಂಸ್ಥೆಯ ಮೂಲಕವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ “ನೋಟ್ ಬುಕ್ ವಿತರಣಾ ” ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಬುಕ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಉಪಾಧ್ಯಕ್ಷರಾದ ಶಿರಿಷ್ ಪ್ರಭು, ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ಪ್ರಮುಖರಾದ ವಿಜಯ ಮಿರಾಶಿ, ರಾಮು ನಾಯ್ಕ, ಪ.ಪಂ ಅಧ್ಯಕ್ಷರಾದ ಶ್ರೀಮತಿ ಸುನಂದಾ ದಾಸ್, ಉಪಾಧ್ಯಕ್ಷರಾದ ಶ್ರೀಮತಿ ಶ್ಯಾಮಿಲಿ ಪಾಟಣಕರ್, ಸದಸ್ಯರಾದ ಶ್ರೀ ರವಿ ಪಾಟಣಕರ್, ಶ್ರೀಮತಿ ಜ್ಯೋತಿ ನಾಯ್ಡು, ನಾಮನಿರ್ದೇಶಿತ ಸದಸ್ಯರಾದ ಶ್ರೀಮತಿ ಕುಮುದಾ ಸಾಣೆ, ಪ್ರಾಂಶುಪಾಲರಾದ ಡಿ.ಎಸ್.ಭಟ್ ಹಾಗೂ ಉಪನ್ಯಾಸಕರು, ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss