ನೆಲಮಂಗಲದಲ್ಲಿ ಭಾರೀ ಗಾಳಿ ಮಳೆ : ಗೇಟ್ ಬಿದ್ದು ಏಳು ವರ್ಷದ ಬಾಲಕಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಳೆ ಬರುತ್ತಿದ್ದ ವೇಳೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಗೇಟ್‌ ತುಂಡಾಗಿ ಬಿದ್ದಿದೆ!

ಹೌದು, ನೆಲಮಂಗಲದ ವಾಜರಹಳ್ಳಿಯಲ್ಲಿ ಯಲ್ಲಮ್ಮ (7) ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದಳು.
ಈ ವೇಳೆ ಬಿರುಗಾಳಿ ಮಳೆಯ ಹೊಡೆತಕ್ಕೆ ಗೇಟ್ ಹಠಾತ್​ ತುಂಡಾಗಿ ಬಾಲಕಿಯ ಮೇಲೆ ರಭಸವಾಗಿ ಬಿದ್ದಿದೆ. ಗೇಟ್ ಕೆಳಗೆ ಸಿಲುಕಿದ ಬಾಲಕಿ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ರಿಯನ್ನು ಕಳೆದುಕೊಂಡ ಮುಕ್ಕಣ್ಣ ಮತ್ತು ಬಾಲಮ್ಮ ದಂಪತಿ ಆಕ್ರಂದನ ಮುಗಿಲು ಮುಟ್ಟಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!