ಕೊಡಗಿನೆಲ್ಲೆಡೆ ಗುಡುಗು ಸಹಿತ ಭಾರೀ ಮಳೆ!

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗಿದೆ.

ಜಿಲ್ಲೆಯಾದ್ಯಂತ ಬೆಳಗಿನಿಂದ ಮೋಡ ಕವಿದ ವಾತಾವರಣವಿತ್ತು. ಅಪರಾಹ್ನ ಜಿಲ್ಲೆಯ ಗಡಿಭಾಗಗಳಾದ ಸಂಪಾಜೆ, ಭಾಗಮಂಡಲ, ಕುಟ್ಟ ಮುಂತಾದ ಕಡೆಗಳಲ್ಲಿ ವರ್ಷದ ಮೊದಲ‌ ಮಳೆಯಾದರೆ, ಸಂಜೆಯಾಗುತ್ತಲೇ ದಕ್ಷಿಣ ಹಾಗೂ ಉತ್ತರ ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ಜಿಲ್ಲೆಯ ವಿವಿಧೆಡೆಗಳಲ್ಲಿ ಮಂಗಳವಾರ ಮಳೆಯಾಗಲಿರುವುದಾಗಿ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದರಲ್ಲದೆ, ಕಾಫಿ ಬೆಳೆಗಾರರು ಮುನ್ನಚ್ಚರಿಕೆ ವಹಿಸುವಂತೆ ಸಲಹೆ ಮಾಡಿದ್ದರು.

ಕೊಡಗಿನಲ್ಲಿ ಇದೀಗ ಕಾಫಿ ಕೊಯ್ಲಿನ ಸಮಯವಾಗಿದ್ದು, ಕಳೆದ ಒಂದು ವಾರದಿಂದ ಉರಿ‌ ಬಿಸಿಲು ಇದ್ದುದರಿಂದ ಬೆಳೆಗಾರರು ಸಂತಸದಿಂದಿದ್ದರು. ಆದರೆ ಇದೀಗ ದಿಢೀರ್ ಮಳೆ ಆರಂಭಗೊಂಡಿರುವುದರಿಂದ ಬೆಳೆಗಾರರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!