ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆ : ಸಿಡಿಲು ಬಡಿದು ಮೂರು ಜಾನುವಾರು ಸಾವು

ಹೊಸದಿಗಂತ ವರದಿ ಕಲಬುರಗಿ :

ಕಲಬುರಗಿ ಜಿಲ್ಲಾದ್ಯಂತ ತಡರಾತ್ರಿಯಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಮೂರು ಜಾನುವಾರುಗಳ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಅವರಳ್ಳಿ ಗ್ರಾಮದಲ್ಲಿ ಬನ್ನೆಪ್ಪಾ ಪೂಜಾರಿ ಎಂಬುವವರಿಗೆ ಸೇರಿದ ಮೂರು ಜಾನುವಾರುಗಳು ಶುಕ್ರವಾರ ನಸುಕಿನ ಜಾವ ಸಾವಿಗೀಡಾಗಿವೆ. ಲಕ್ಷಾಂತರ ಮೌಲ್ಯದ ಜಾನುವಾರುಗಳನ್ನು ಕಳೆದುಕೊಂಡು ರೈತ ಕಂಗಲಾಗಿದ್ದಾನೆ.

ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಬಿಸಿಲಿನ ಝಳದಿಂದ ತತ್ತರಿ‌ಸಿದ ಬಿಸಿಲು ಮಂದಿಗೆ ತಂಪೆರೆದಂತಾಗಿದೆ.

ಇನ್ನೂ ಮಹಾರಾಷ್ಟ್ರ ಕರ್ನಾಟಕ ಗಡಿಭಾಗದ ಬಳ್ಳೂರ್ಗಿ ಹಾಗೂ ಅರ್ಜುಣಗಿಯ ಗಡಿ ಭಾಗದಲ್ಲಿ ಹಾಕಲಾದ ಪೋಲಿಸ್ ಟೆಂಟ್ ಗಳು ಧರೆಗುರುಳಿ ಬಿದ್ದಿವೆ.

ಅದೇ ರೀತಿ ಜಿಲ್ಲೆಯ ಅಫಜಲಪುರನಲ್ಲಿ ತಾಲೂಕಿನ ಪಟ್ಟಣದಲ್ಲಿ ಹಾಕಲಾದ ಪೋಲಿಸ್ ಬ್ಯಾರಿಕೇಟ್‌ಗಳು ಗಾಳಿಗೆ ಹಾರಿ ಹೋಗಿವೆ.

ಚುನಾವಣಾ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿತ್ತು. ನಿನ್ನೆ ರಾತ್ರಿ ಸುರಿದ ಮಳೆಗೆ ಪೋಲಿಸ್ ಸಿಬ್ಬಂದಿ ಸಲುವಾಗಿ ಹಾಕಲಾದ ಟೆಂಟ್‌ಗಳು ಕೂಡ ಹಾರಿ ಹೋಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!