ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರರಾಜಧಾನಿ ದೆಹಲಿ, ಬಿಹಾರ್, ಸಿಕ್ಕಿಂ, ತಮಿಳುನಾಡು ಮತ್ತು ಜಮ್ಮು ಕಾಶ್ಮೀರದಲ್ಲಿ ಮಳೆ ಹೆಚ್ಚಾಗಿದ್ದು, ಹಲವೆಡೆ ಹಿಮ, ಗುಡುಗು ಸಹಿತ ಮಳೆಯಾಗಿದೆ.
ಜಮ್ಮು ಕಾಶ್ಮೀರದ ಶೋಪಿಯನ್ ಜಿಲ್ಲೆ, ವೈಷ್ಣೋದೇವಿ, ಶ್ರೀನಗರ, ಹಿಮಾಚಲ ಪ್ರದೇಶ ಹಿಮದಿಂದ ಆವೃತವಾಗಿವೆ. ಜಮ್ಮು ಕಾಶ್ಮೀರದಲ್ಲಿ ವಿಪರೀತ ಮಳೆ ಹಾಗೂ ರಸ್ತೆಗಳು ಹಿಮದಿಂದ ಆವೃತವಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇಂದು ಕೂಡ ಜಮ್ಮು ಕಾಶ್ಮೀರದ ಕೆಲವು ಭಾಗಗಳಲ್ಲಿ ಹಿಮಪಾತ ಹಾಗೂ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
#WATCH Snowfall at Mata Vaishno Devi shrine in Katra, Jammu & Kashmir
Battery car, helicopter services remain suspended, Yatra underway pic.twitter.com/gaOvNxg4k7
— ANI (@ANI) January 8, 2022
ದೆಹಲಿಯ ಪುಲ್ ಪೆಹ್ಲಾದ್ ಪುರ್ ಅಂಡರ್ ಪಾಸ್, ಮಂಡವಲ್ಲಿ ಅಂಡರ್ ಪಾಸ್, ಸಂಪೂರ್ಣ ಜಲಾವೃತಗೊಂಡಿದ್ದು, ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಪೂರ್ವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಮಣಿಪುರದಲ್ಲೂ ಇಂದು ದಟ್ಟವಾದ ಮಂಜು ಆವರಿಸಲಿದೆ.
ಇನ್ನು ಸೋಮವಾರದಿಂದ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಮಳೆಯಾಗಲಿದೆ.