ಭಾರೀ ಹಿಮಪಾತಕ್ಕೆ ಅಫ್ಘಾನ್ ತತ್ತರ: 15 ಮಂದಿ ಸಾವು, 30 ಜನರ ಸ್ಥಿತಿ ಗಂಭೀರ 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ವರದಿ ಪ್ರಕಾರ 30 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಪ್ರಾಣಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಸುಮಾರು ಹತ್ತು ಸಾವಿರ ಪ್ರಾಣಿಗಳು ಸತ್ತಿವೆ. ಈ ಬಗ್ಗೆ ಸಾರ್-ಇ-ಪುಲ್ ನಿವಾಸಿ ಅಬ್ದುಲ್ ಖಾದಿರ್ ಮಾಹಿತಿ ನೀಡಿದ್ದಾರೆ. ಮೂರು ದಿನಗಳಿಂದ ಹಿಮ ಸುರಿಯುತ್ತಿದೆ. ಜಾನುವಾರುಗಳೂ ಸಾಯುತ್ತಿವೆ. ಇದು ಇಲ್ಲಿನ ಜನರ ಭಯವನ್ನು ಹೆಚ್ಚಿಸಿದೆ. ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!