ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಭಾರೀ ವಾಹನಗಳಿಗೆ ಇಲ್ಲ ಅವಕಾಶ

ಹೊಸದಿಗಂತ ವರದಿ,ಶಿವಮೊಗ್ಗ:

ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಭಾರೀ ವಾಹನ ಸಂಚಾರವನ್ನು ನಿಷೇಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಸುಗಮ ಸಂಚಾರ ಕುರಿತು ವಿವಿಧ ಸಂಘಟನೆಗಳ ಪ್ರಮುಖರ ಜೊತೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ. ಮಿಥುನ್ ಕುಮಾರ್ ನಿರ್ಧಾರ ಪ್ರಕಟಿಸಿದರು.

ಮುಂದುವರಿದು ಅವರು ಮಾತನಾಡಿ, ನಗರದ ಹಲವು ರಸ್ತೆಗಳಲ್ಲಿ ಈಗಾಗಲೇ ಭಾರೀ ವಾಹನ ಸಂಚಾರಕ್ಕೆ ನಿರ್ಬಂ‘ ವಿಸಲಾಗಿದೆ. ಆದರೆ ಒಂದೊಂದು ರಸ್ತೆಗೆ ಒಂದೊಂದು ಸಮಯ ಇದೆ. ಅದನ್ನೀಗ ಎಲ್ಲಾ ರಸ್ತೆಗಳಿಗೂ ಒಂದೇ ಸಮಯ ನಿಗದಿ ಮಾಡಲಾಗುತ್ತಿದೆ. ಇದರ ಬಗ್ಗೆ ಸಲಹೆಗಳಿದ್ದರೆ ಇನ್ನು ಮೂರು ದಿನಗಳ ಒಳಗೆ ನೀಡಬಹುದಾಗಿದೆ ಎಂದರು.
ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ಬಳಿಯಿಂದ ವಿನೋಬನಗರ ಚೌಕಿ, ಸಂದೇಶ್ ಮೋಟಾರ್ಸ್ ಬಳಿಯಿಂದ ನೇರ ಎಪಿಎಂಸಿ, ಮಹಾವೀರ ಸರ್ಕಲ್‌ನಿಂದ ತುಂಗಾ ಸೇತುವೆ, ಬೆಕ್ಕಿನ ಕಲ್ಮಠದಿಂದ ಇಮಾಂಬಾಡಾ-ಡಬಲ್ ರಸ್ತೆಗಳನ್ನು ಹೊಸದಾಗಿ ಸೇರಿಸಲಾಗಿದೆ. ಇನ್ನುಳಿದ ರಸ್ತೆಗಳು ಹಿಂದೆಯೇ ಸೇರ್ಪಡೆ ಆಗಿವೆ ಎಂದು ತಿಳಿಸಿದರು.
ಕಾನೂನು ಇರಲಿಲ್ಲ…
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿ, ಭಾರೀ ವಾಹನ ಸಂಚಾರ ನಿರ್ಬಂ‘ಕ್ಕೆ ಕಾನೂನು ಇರಲಿಲ್ಲ. ಈಗ ಅಸೂಚನೆ ಹೊರಡಿಸಲಾಗುತ್ತಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ಬಸ್ ನಿಲುಗಡೆ ಮಾಡಬೇಕು. ನಗರ ಸಾರಿಗೆ ಬಸ್ ಸಮಯವನ್ನೂ ವೈಜ್ನಾನಿಕವಾಗಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಅಕಾರಿ ಗಂಗಾ‘ರ, ಡಿವೈಎಸ್‌ಪಿ ಬಾಲರಾಜ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಟ್ರಾಫಿಕ್ ಇನ್ಸ್‌ಪೆಕ್ಟರ್ ಸಂತೋಷ್ ಇದ್ದರು.ಶೀಘ್ರ ಟ್ರಕ್ ಟರ್ಮಿನಲ್‌ಗೆ ಜಾಗ
ನಗರದಲ್ಲಿ ಎಲ್ಲಿಯೂ ಬಸ್‌ಗಳನ್ನು ನಿಲ್ಲಿಸಲು ಜಾಗ ಇಲ್ಲ. ಮಿಳಘಟ್ಟ ರಸ್ತೆಯಲ್ಲಿ ಬಸ್ ಕೆಲ ಸಮಯ ನಿಲ್ಲಿಸಲು ಅವಕಾಶ ಬೇಕು ಎಂದು ಬಸ್ ಮಾಲೀಕರು ಕೋರಿದರು.
ಡಾ.ಸೆಲ್ವಮಣಿ ಪ್ರತಿಕ್ರಿಯಿಸಿ, ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಶೀಘ್ರ 40 ಎಕರೆ ಜಾಗ ಅಂತಿಮ ಮಾಡಲಾಗುತ್ತಿದೆ. ಅಲ್ಲಿಯೇ ಬಸ್ ನಿಲುಗಡೆಗೂ ಅವಕಾಶ ನೀಡಲಾಗುವುದು. ಮಿಳಘಟ್ಟ ರಸ್ತೆಯಲ್ಲಿ ಬಸ್ ನಿಲ್ಲಿಸಲು ಅವಕಾಶ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!