Tuesday, August 16, 2022

Latest Posts

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಹೆಜಮಾಡಿ ವಿಠ್ಠಲ್ ಭಟ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಡುಬಿದ್ರಿಯ ರಾಷ್ಟೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರೂ ಹಾಗೂ ಹೆಜಮಾಡಿ ಮಲ್ಯರ ಮಠ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚರಾಗಿ ಸೇವೆ ಸಲ್ಲಿಸಿದ ವೇದಮೂರ್ತಿ ಶ್ರೀ ವಿಠಲ್ ಭಟ್ ರವರು ಇಂದು (01.07.22) ಬೆಳಿಗ್ಗೆ ನಿಧನರಾದರು.

ಅವಿವಾಹಿತರಾಗಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೆಜಮಾಡಿ ಗ್ರಾಮವೂ ಸೇರಿದಂತೆ ಕಾಪು ತಾಲೂಕಿನಲ್ಲಿ ಸಂಘದ ಶಾಖೆಗಳೂ ಸೇರಿದಂತೆ ಹಿಂದು ಸಂಘಟನೆಯ ಕಾರ್ಯದ ಬೆಳವಣಿಗೆಯಲ್ಲಿ ಅವರ ಪಾತ್ರ ಅನನ್ಯವಾದುದು. ಅಯೋಧ್ಯಾ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಕರಸೇವೆಯಲ್ಲಿ ಭಾಗವಹಿಸಿದ್ದರು.

ಜನಸಂಘದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ವಿಠ್ಠಲ್ ಭಟ್ ರವರು ಡಾ. ವಿ ಎಸ್. ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ, ಉಡುಪಿ ಸೋಮಶೇಖರ ಭಟ್ ಮುಂತಾದವರ ಒಡನಾಡಿಯಾಗಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ವಿಠ್ಠಲ್ ಭಟ್ ರವರು ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳನ್ನು ನೆಟ್ಟಿದ್ದರು. ಸ್ನೇಹಜೀವಿಯಾಗಿದ್ದ ಅವರು ತನ್ನ ಇಳಿ ವಯಸ್ಸಿ ನವರೆಗೂ ಹಿಂದು ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಂಡು ಅನೇಕರಿಗೆ ಪ್ರೇರಣೆ ಹಾಗೂ ಮಾರ್ಗದರ್ಶಕರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss