ಹೆಜ್ಜೇನು ದಾಳಿಗೆ ಬಲಿಯಾಯ್ತು ಎರಡು ಕೋಟಿ ರೂ. ಮೌಲ್ಯದ ಕುದುರೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಣಿಗಲ್‌ನಲ್ಲಿ ಹೆಜ್ಜೇನು ದಾಳಿಗೆ ಎರಡು ಕುದುರೆಗಳು ಮೃತಪಟ್ಟಿದ್ದು, ಇದೆರಡರ ಮೌಲ್ಯ ಎರಡು ಕೋಟಿ ರೂಪಾಯಿ ಎನ್ನಲಾಗಿದೆ.

ಅಮೆರಿಕ ಮೂಲದ ಏರ್‌ಸಪೋರ್ಟ್ ಮತ್ತು ಐರ್ಲೆಂಡ್ ಮೂಲದ ಸನಸ್‌ಪರ್ ಅಕ್ಷಮ್ ಕುದುರೆಗಳು ಮೃತಪಟ್ಟಿವೆ. ಬಯಲಿನಲ್ಲಿ ಮೇಯುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದು, ದಾಳಿಯಿಂದ ಕುದುರೆಗಳು ತೀವ್ರ ಅಸ್ವಸ್ಥರಾಗಿದ್ದರು. ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೇ ಕುದುರೆಗಳು ಮೃತಪಟ್ಟಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!