7ನೇ ವೇತನಾ ಆಯೋಗ ಎಚ್‌ಆರ್‌ಎ ನಿಯಮ ಪರಿಷ್ಕರಣೆ- ಈ ಸಂದರ್ಭಗಳಲ್ಲಿ ನಿಮಗೆ ಮನೆ ಬಾಡಿಗೆ ಭತ್ಯೆ ಸಿಗೋಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಣಕಾಸು ಸಚಿವಾಲಯದ ಅಡಿಯಲ್ಲಿನ ಖರ್ಚು ಇಲಾಖೆ (DoE) ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA) ಗೆ ಸಂಬಂಧಿಸಿದ ನಿಯಮಗಳನ್ನು ನವೀಕರಿಸಿದೆ. ನವೀಕರಿಸಿದ ನಿಯಮಗಳ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಉದ್ಯೋಗಿ ಎಚ್‌ಆರ್‌ಎಗೆ ಅರ್ಹರಾಗಿರುವುದಿಲ್ಲ.

ಈ ಕೆಳಗಿನ ಸಂದರ್ಭಗಳಲ್ಲಿ ಸರ್ಕಾರಿ ಉದ್ಯೋಗಿ ಎಚ್‌ಆರ್‌ಎಗೆ ಅರ್ಹರಾಗಿರುವುದಿಲ್ಲ:

  • ಉದ್ಯೋಗಿ ಇನ್ನೊಬ್ಬ ಸರ್ಕಾರಿ ನೌಕರನಿಗೆ ಮಂಜೂರು ಮಾಡಲಾದ ಸರ್ಕಾರಿ ವಸತಿಗಳನ್ನು ಹಂಚಿಕೊಂಡರೆ ಎಚ್‌ಆರ್‌ಎಗೆ ಅರ್ಹರಾಗಿರುವುದಿಲ್ಲ
  • ಅವನು ಅಥವಾ ಅವಳು ತಮ್ಮ ತಂದೆ,ತಾಯಿ,ಮಗ ಅಥವಾ ಮಗಳಿಗೆ ಕೇಂದ್ರ, ರಾಜ್ಯ ಸರ್ಕಾರ, ಸ್ವಾಯತ್ತ ಸಾರ್ವಜನಿಕ ವಲಯದ ಉದ್ಯಮ ಮತ್ತು ಅರೆ-ಸರ್ಕಾರಿ ಸಂಸ್ಥೆಗಳು (ಪುರಸಭೆ, ಬಂದರು ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್‌ಗಳು, LIC ಇತ್ಯಾದಿ)ಗಳಿಂದ ಮಂಜೂರು ಮಾಡಿದ ನಿವಾಸದಲ್ಲಿ ವಾಸಿಸುತ್ತಿದ್ದರೆ ಎಚ್‌ಆರ್‌ಎಗೆ ಅರ್ಹರಾಗಿರುವುದಿಲ್ಲ.
  • ಸರ್ಕಾರಿ ನೌಕರನ ಸಂಗಾತಿಗೆ ಸರ್ಕಾರಿ ನೌಕರನಂತೆಯೇ ಅದೇ ಪ್ರದೇಶದಲ್ಲಿ ಮೇಲೆ ತಿಳಿಸಲಾದ ಯಾವುದೇ ಸಂಸ್ಥೆಗಳಿಂದ ನಿವಾಸವನ್ನು ಪಡೆದಿದ್ದರೆ, ಅಥವಾ ನೌಕರನು ಅದೇ ವಸತಿಗೃಹದಲ್ಲಿ ಪ್ರತ್ಯೇಕವಾಗಿ ಅಥವಾ ಬಾಡಿಗೆಗೆ ಇದ್ದರೆ

ಮನೆ ಬಾಡಿಗೆ ಭತ್ಯೆಯನ್ನು X, Y ಮತ್ತು Z ಎಂಬ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು ಅವುಗಳು ಹೀಗಿವೆ

  • 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೆ X ಎಂದು ವಿಂಗಡಿಸಲಾಗಿದ್ದು 7ನೇ ಕೇಂದ್ರೀಯ ವೇತನ ಆಯೋಗವು (CPC) ಶಿಫಾರಸ್ಸು ಮಾಡಿದಂತೆ, 24 ಶೇ. HRA ನೀಡಲಾಗುತ್ತದೆ.
  • 5 ಲಕ್ಷದಿಂದ 50 ಲಕ್ಷದ ನಡುವಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಿಗೆ ‘Y’ ಎಂದು ವಿಭಾಗಿಸಲಾಗಿದ್ದು 16 ಶೇಕಡಾದಷ್ಟು HRA ನೀಡಲಾಗುತ್ತದೆ.
  • 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವಲ್ಲಿ ‘Z ಎಂದು ವಿಭಾಗಿಸಲಾಗಿದ್ದು 8 ಶೇಕಡಾದಷ್ಟು HRA ನೀಡಲಾಗುತ್ತದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!