ʼಹಲೋ ಎಂಎಲ್ಎʼ.. ಗುಜರಾತ್ ಚುನಾವಣೆಯಲ್ಲಿ ಪತ್ನಿ ಗೆಲುವನ್ನು ಸಂಭ್ರಮಿಸಿದ ರವೀಂದ್ರ ಜಡೇಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭರ್ಜರಿ ಜಯಗಳಿಸಿರುವ ತಮ್ಮ ಪತ್ನಿ ರಿವಾಬಾ ಅವರಿಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಜಡೇಜಾ, “ಹಲೋ ಎಂಎಲ್ಎ.. ನೀವು ನಿಜವಾಗಿಯೂ ಗೆಲುವಿಗೆ ಅರ್ಹರು” ಎಂದು ಬರೆದುಕೊಂಡಿದ್ದಾರೆ.
ರಿವಾಬಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ (ಎಎಪಿ) ಕರ್ಶನ್‌ಭಾಯ್ ಅವರನ್ನು 53,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ರಿವಾಬಾ 88,835 ಮತಗಳನ್ನು ಪಡೆದರೆ, ಕರ್ಶನ್ಭಾಯ್ 35,265 ಮತಗಳನ್ನು ಪಡೆದಿದ್ದಾರೆ.
“ಹಲೋ ಎಂಎಲ್ಎ, ನೀವು ನಿಜವಾಗಿಯೂ ಅರ್ಹರು. ನಿಮ್ಮ ಗೆಲುವಿನಿಂದ ಜಾಮ್ ನಗರದ ಜನರು ಗೆದ್ದಿದ್ದಾರೆ. ನನ್ನ ಹೃದಯದಿಂದ ಎಲ್ಲಾ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇನ್ನು ಮುಂದೆ ಜಾಮ್ನಗರದ ಕೆಲಸಗಳು ತುಂಬಾ ಚೆನ್ನಾಗಿ ನಡೆಯಲಿವೆ” ಎಂದು ಜಡೇಜಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!