ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಧಾನಿ ಮೋದಿಗೆ ಸಹಾಯ ಕೋರಿ ಪತ್ರವೊಂದನ್ನು ಬರೆದಿದ್ದಾರೆ.
ಮಾನವೀಯ ಆಧಾರದ ಮೇಲೆ ಸಹಾಯ ಮಾಡಿ, ಔಷಧ, ವೈದ್ಯಕೀಯ ಉಪಕರಣ ಹಾಗೂ ಇನ್ನಿತರ ಮೂಲಭೂತ ಅಗತ್ಯಗಳನ್ನು ಪೂರೈಸುವಂತೆ ಉಕ್ರೇನ್ ಮನವಿ ಮಾಡಿದೆ.
ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿದ್ದು, ಹೆಚ್ಚುವರಿ ಮಾನವೀಯ ನೆರವಿನ ಅವಶ್ಯ ಇದೆ. ಈ ನಿಟ್ಟಿನಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂಬುದು ನಮಗೆ ತಿಳಿದಿದೆ. ಈಗಾಗಲೇ ಭಾರತ ನಮ್ಮ ದೇಶಕ್ಕೆ ಸಾಕಷ್ಟು ಸಹಾಯ ಮಾಡಿದೆ. ಈ ಪ್ರಮುಖ ದೇಶದಿಂದ ಇನ್ನಷ್ಟು ಮಾನವೀಯ ನೆರವು ನಿರೀಕ್ಷಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ನಾವು ಯುದ್ಧದಿಂದ ತತ್ತರಿಸಿದ್ದೇವೆ ಆದರೆ ಯಾವುದೇ ಕಾರಣಕ್ಕೂ ರಷ್ಯಾ ಮುಂದೆ ಮಂಡಿಯೂರುವುದಿಲ್ಲ. ಪ್ರತಿಯೊಬ್ಬ ಉಕ್ರೇನ್ ಪ್ರಜೆಯೂ ಜೀವ ಇರುವವರೆಗೂ ಹೋರಾಡುತ್ತೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನಮ್ಮ ಹೋರಾಟಕ್ಕೆ ಜಾಗತಿಕ ನೆರವು ಬೇಕಿದೆ. ಅದರಲ್ಲೂ ಭಾರತದಿಂದ ನಾವು ನಿರೀಕ್ಷೆ ಮಾಡುತ್ತೇವೆ. ಜನಮನ್ನಣೆ ಗಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಮಗೆ ಭರವಸೆ ಇದೆಎಂದು ಬರೆದಿದ್ದಾರೆ.
ಯುದ್ಧಕ್ಕೆ ಅಂತ್ಯ ಹಾಡುವ ಸಲುವಾಗಿ ಜಗತ್ತಿನ ಪ್ರಬಲ ರಾಷ್ಟ್ರಗಳ ಬಳಿ ಉಕ್ರೇನ್ ಮನವಿ ಮಾಡುತ್ತಿದೆ.