ತುಸು ಏರಿದ ನಿಫ್ಟಿ: ಇಂದಿನ ಷೇರು ಮಾರುಕಟ್ಟೆ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶೀಯ ಸೂಚ್ಯಂಕಗಳು ಬುಧವಾರ ಸ್ಥಿರವಾಗಿ ತೆರೆದಿವೆ. ಎನ್‌ಎಸ್‌ಇ ನಿಫ್ಟಿ 50ಯು 15.45 ಅಂಕಗಳು ಅಥವಾ 0.09 ಶೇಕಡಾದಷ್ಟು ಏರಿಕೆಯಾಗಿ 17,737.75 ಅಂಕಗಳಿಗೆ ತಲುಪಿದೆ. ಆದರೆ ಬಿಎಸ್‌ಇ ಸೆನ್ಸೆಕ್ಸ್ 33.89 ಪಾಯಿಂಟ್‌ಗಳು ಅಥವಾ 0.06 ಶೇಕಡಾ ಕುಸಿದು 60,123.83 ಅಂಕಗಳಿಗೆ ತಲುಪಿದೆ ಮತ್ತು ಬ್ಯಾಂಕ್ ನಿಫ್ಟಿ 23.05 ಪಾಯಿಂಟ್‌ಗಳು ಅಥವಾ 0.06% ರಷ್ಟು ಕುಸಿದು 41,343.45 ಕ್ಕೆ ತಲುಪಿದೆ.

ನಿಫ್ಟಿ 50ಯಲ್ಲಿ ದಿವಿಸ್ ಲ್ಯಾಬ್, ಹಿಂಡಾಲ್ಕೊ, ಅಪೊಲೊ ಆಸ್ಪತ್ರೆ, ಗ್ರಾಸಿಮ್ ಮತ್ತು ಸಿಪ್ಲಾ ಟಾಪ್ ಗೇನರ್ ಆಗಿದ್ದರೆ, ಇಂಡಸ್‌ಇಂಡ್ ಬ್ಯಾಂಕ್, ಹೀರೋ ಮೋಟೋಕಾರ್ಪ್, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ ಲೈಫ್ ಮತ್ತು ಟೆಕ್ ಮಹೀಂದ್ರಾ ಟಾಪ್ ಲೂಸರ್‌ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!