Saturday, February 4, 2023

Latest Posts

ತನ್ನ ತಾಯಿಗೆ ಬ್ರೈನ್ ಟ್ಯೂಮರ್, ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಪ್ರಾರ್ಥಿಸಿ: ಕಣ್ಣೀರಿಟ್ಟ ರಾಖಿ ಸಾವಂತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ರಾಖಿ ಸಾವಂತ್ ತಾಯಿ ಜಯ ಸಾವಂತ್ ಆಸ್ಪತ್ರೆ ದಾಖಲಾಗಿದ್ದಾರೆ .

ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಡಿಯೋ ಶೇರ್ ಮಾಡಿ ಕಣ್ಣೀರಾಕಿರುವ ಅವರು, ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇದೆ ಎಂದು ಹೇಳಿದ್ದಾರೆ. ತಾಯಿ ಆಸ್ಪತ್ರೆಯಲ್ಲಿದ್ದಾರೆ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ.

ರಾಖಿ ಸಾವಂತ್ ಇತ್ತೀಚಿಗೆ ಮರಾಠಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ತಾಯಿಯ ಆರೋಗ್ಯ ಸರಿ ಇಲ್ಲದೇ ಆಸ್ಪತ್ರೆ ಸೇರಿದ್ದಾರೆ ಎನ್ನುವ ಕಾರಣಕ್ಕೆ ರಾಖಿ ಸಾವಂತ್ ಬಿಗ್ ಮನೆಯಿಂದ ಹೊರ ಬಂದಿದ್ದಾರೆ.

ವಿಡಿಯೋದಲ್ಲಿ ರಾಖ್, ‘ಎಲ್ಲರಿಗೂ ನಮಸ್ಕಾರ, ನಾನು ನಿನ್ನೆ ರಾತ್ರಿ ಬಿಗ್ ಬಾಸ್ ಮರಾಠಿ ಸೀಸನ್ 4 ರಿಂದ ಹೊರಬಂದೆ. ನನ್ನ ತಾಯಿಗೆ ಆರೋಗ್ಯ ಸರಿ ಇಲ್ಲ. ಅವರು ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ’ ಎಂದು ಕೇಳಿಕೊಂಡಿದ್ದಾರೆ.

‘ಅಮ್ಮ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ. ಅವರಿಗೆ ಕ್ಯಾನ್ಸರ್‌ನೊಂದಿಗೆ ಬ್ರೈನ್ ಟ್ಯೂಮರ್ ಇದೆ ಎಂದು ನಮಗೆ ಗೊತ್ತಾಯಿತು. ತಾನು ಬಿಗ್ ಬಾಸ್ ಮರಾಠಿ ಮನೆಯಲ್ಲಿದ್ದಾಗ ಯಾರೂ ತನ್ನ ತಾಯಿಯ ಆರೋಗ್ಯದ ಬಗ್ಗೆ ಹೇಳಲಿಲ್ಲ. ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ರಾಖಿ ಹೇಳಿಕೊಂಡಿದ್ದಾರೆ.

ಅದೇ ವಿಡಿಯೋದಲ್ಲಿ ರಾಖಿ ತನ್ನ ತಾಯಿಯ ಆರೋಗ್ಯದ ಬಗ್ಗೆ ವೈದ್ಯರ ಬಳಿ ಕೇಳಿದ್ದಾರೆ. ‘ಅವರ ಎಡಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ. ಸ್ಯಾಂಪಲ್ ಅನ್ನು ಹೊರತೆಗೆದು ಲ್ಯಾಬ್‌ಗೆ ಕಳುಹಿಸಲಾಗಿದೆ, ಶುಕ್ರವಾರ ರಿಸಲ್ಟ್ ಗೊತ್ತಾಗಲಿದೆ. ನಂತರವೇ ನಮಗೆ ಗೊತ್ತಾಗಲಿದೆ. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ಇದೀಗ ಆಪರೇಷನ್ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!