July 8, 2026
Wednesday, July 8, 2026
spot_img

ಮೈದಾನದಲ್ಲೇ ‘ಹೇರಾ ಫೇರಿ’ ಡೈಲಾಗ್! ರಿಝ್ವಾನ್‌ಗೆ ಬಾಂಗ್ಲಾ ಆಟಗಾರರ ಫುಲ್ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಸಿಲ್ಹೆಟ್ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಜೊತೆಗೆ ಹಾಸ್ಯಮಯ ಡ್ರಾಮಾವೂ ನಡೆದಿದ್ದು, ಮೈದಾನದಲ್ಲೇ ಬಾಲಿವುಡ್ ಡೈಲಾಗ್‌ಗಳು ಸದ್ದು ಮಾಡಿವೆ.

ಪಾಕಿಸ್ತಾನ್ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ವರ್ತನೆಗೆ ಸಿಟ್ಟಾದ ಬಾಂಗ್ಲಾದೇಶ್ ಆಟಗಾರರು, ‘ಹೇರಾ ಫೇರಿ’ ಸಿನಿಮಾದ ಡೈಲಾಗ್‌ಗಳನ್ನು ಬಳಸಿ ಟಾಂಗ್ ನೀಡಿದ್ದಾರೆ.

ಸೈಟ್‌ಸ್ಕ್ರೀನ್ ನೆಪಕ್ಕೆ ಆಟ ನಿಲ್ಲಿಸಿದ ರಿಝ್ವಾನ್

437 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದ ಪಾಕಿಸ್ತಾನ್ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದ ರಿಝ್ವಾನ್, ತೈಜುಲ್ ಇಸ್ಲಾಂ ಬೌಲಿಂಗ್ ವೇಳೆ ಪದೇ ಪದೇ ಸೈಟ್‌ಸ್ಕ್ರೀನ್ ಸಮಸ್ಯೆ ಹೇಳಿ ಆಟ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಬಾಂಗ್ಲಾದೇಶ್ ಆಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಲಿಟ್ಟನ್ ದಾಸ್-ರಿಝ್ವಾನ್ ಮಾತಿನ ಚಕಮಕಿ

ಬಾಂಗ್ಲಾ ವಿಕೆಟ್ ಕೀಪರ್ ಲಿಟ್ಟನ್ ದಾಸ್, “ಎಷ್ಟು ಬಾರಿ ಬೌಲರ್‌ಗೆ ತೊಂದರೆ ಕೊಡ್ತೀರಾ?” ಎಂದು ಪ್ರಶ್ನಿಸಿದ ಬಳಿಕ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

‘ಓವರ್ ಆ್ಯಕ್ಟಿಂಗ್’ಗೆ ಬಾಲಿವುಡ್ ಟಚ್

ಇದಾದ ಬಳಿಕ ಬಾಂಗ್ಲಾದೇಶ್ ಆಟಗಾರರು “ಹಮ್ ಇಸ್ ಓವರ್ ಆ್ಯಕ್ಟಿಂಗ್ ಕಾ ಫಿಫ್ಟಿ ಪೈಸಾ ಕಾಟೇಂಗೆ” ಹಾಗೂ “ಬಾಲಿವುಡ್ ಮೇ ಜಗಾ ನಹೀ ಹೈ” ಎಂದು ಹಾಸ್ಯಮಯ ಟೀಕೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !