ಇಲ್ಲಿ ‘ಲೋಕ’ ಭವಿಷ್ಯ ಬರೆಯಲು ಸಜ್ಜಾಗಿದ್ದಾರೆ ನೂರು ವರ್ಷಕ್ಕೆ ಮೇಲ್ಪಟ್ಟ 2,999 ಮಂದಿ ಮತದಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೂರು ವರ್ಷಕ್ಕೂ ಮೇಲ್ಪಟ್ಟ 2,999 ಮಂದಿ ಹಕ್ಕು ಚಲಾಯಿಸಲು ಸಿದ್ಧರಾಗುತ್ತಿದ್ದಾರೆ.

ಮತದಾರರ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್, ಮಾ. 18ರವರೆಗೆ ಕೇರಳ ರಾಜ್ಯದಲ್ಲಿ 2,72,80,160 ಮತದಾರರಿದ್ದಾರೆ. ಈ ಪೈಕಿ 25 ವರ್ಷ ಮೇಲ್ಪಟ್ಟವರ ಸಂಖ್ಯೆ 2,49,960, 88,384 ಮಂದಿ ಅನಿವಾಸಿ ಮತದಾರರಿದ್ದಾರೆ ಎಂದಿದ್ದಾರೆ.

ಇನ್ನು ಕಳೆದ ವರ್ಷ 13 ಲಕ್ಷ ಜನರಿಗೆ ವಿನಾಯಿತಿ ನೀಡಲಾಗಿದೆ. ಈ ವರ್ಷ ಇದುವರೆಗೆ 8 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!