ಪುರಕ್ಕಾಡ್ ಬೆನ್ನಲ್ಲೇ ವರ್ಕಲ ಪರಿಸರದಲ್ಲೂ ಹಿಂದಕ್ಕೆ ಸರಿದ ಸಾಗರ: ಆತಂಕ ಬೇಡ ಎಂದ ಇಲಾಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಪುರಕ್ಕಾಡ್‌ನಲ್ಲಿ ಸಮುದ್ರ ಸುಮರು 50 ಮೀಟರ್ ದೂರ ಹಿಂದಕ್ಕೆ ಸರಿದಿರುವುದು ನಿಜ ಎಂದು ಕಂದಾಯ ಮತ್ತು ಭೂವಿಜ್ಞಾನ ಇಲಾಖೆ ಹೇಳಿದೆ.

ಇದೇ ವೇಳೆ ತಿರುವನಂತಪುರದ ವರ್ಕಲ ಪರಿಸರದಲ್ಲಿ ಕೂಡಾ ಸಮುದ್ರ ಹಿಂದೆ ಸರಿದಿದ್ದು, ಅಲ್ಲೂ ಆತಂಕ ಸೃಷ್ಟಿಯಾಗಿದೆ. ಇಲ್ಲಿ ಕಡಲತೀರದಿಂದ ಸಮುದ್ರವು ಸುಮಾರು 25 ಮೀಟರ್ ಹಿಂದೆ ಸರಿದಿದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.

ಸಮುದ್ರದ ಹಿಂದೆ ಸರಿಯುವಿಕೆ ಸಹಜ ವಿದ್ಯಮಾನ. ಈ ಬಗ್ಗೆ ಆತಂಕ ಬೇಕಾಗಿಲ್ಲ. ಬೇಸಿಗೆಯ ಇಳಿತದ ಸಮಯದಲ್ಲಿ ಇದು ಸಹಜ ಪ್ರಕ್ರಿಯೆ ಎಂದು ಇಲಾಖೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!