November 17, 2026
Tuesday, November 17, 2026
spot_img

ಚಳಿಗಾಲದ ಮಂಜಿನ ಜೊತೆ ಧೂಳಿನ ಕಾಟ: ಬೆಂಗಳೂರು, ಬೀದರ್‌ನಲ್ಲಿ ಉಸಿರಾಡುವುದೇ ಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಳಿಗಾಲ ಶುರುವಾಗುತ್ತಿದ್ದಂತೆ ಬೆಳಗಿನ ಮಂಜಿನ ಜೊತೆಗೆ ರಾಜ್ಯದ ಗಾಳಿಯ ಗುಣಮಟ್ಟದಲ್ಲೂ ದೊಡ್ಡ ಮಟ್ಟದ ಬದಲಾವಣೆ ಕಾಣಿಸಿಕೊಂಡಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹಾಗೂ ಪರಿಸರ ಸಂಸ್ಥೆಗಳು ಬಿಡುಗಡೆ ಮಾಡಿರುವ ಇಂದಿನ ವರದಿಯ ಪ್ರಕಾರ, ರಾಜ್ಯದ ಕೆಲವು ನಗರಗಳಲ್ಲಿ ಗಾಳಿಯು ಆರೋಗ್ಯಕ್ಕೆ ಹಾನಿಕಾರಕ ಮಟ್ಟಕ್ಕೆ ತಲುಪಿದ್ದರೆ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿನ ವಾತಾವರಣ ತುಂಬಾ ಹಿತಕರವಾಗಿದೆ.

ಬೆಂಗಳೂರಿಗರಿಗೆ ಶುರುವಾಯ್ತು ಆತಂಕ

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 110 ರಿಂದ 152ರ ಗಡಿ ದಾಟಿದ್ದು, ‘ಅಸುರಕ್ಷಿತ’ ಹಂತಕ್ಕೆ ತಲುಪಿದೆ. ಗಾಳಿಯಲ್ಲಿ PM2.5 ಮತ್ತು PM10 ನಂತಹ ಸೂಕ್ಷ್ಮ ಧೂಳಿನ ಕಣಗಳು ಹೆಚ್ಚಾಗಿ ಸೇರಿಕೊಂಡಿವೆ. ಬೆಳಗಿನ ಚಳಿಯೊಂದಿಗೆ ಈ ಧೂಳು ಸೇರಿರುವುದರಿಂದ ಅಸ್ತಮಾ, ಅಲರ್ಜಿ ಅಥವಾ ಉಸಿರಾಟದ ತೊಂದರೆ ಇರುವವರು ಮುಂಜಾನೆ ರಸ್ತೆ ಬದಿ ವಾಕಿಂಗ್ ಅಥವಾ ವ್ಯಾಯಾಮ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಕಿವಿಮಾತು ಹೇಳಿದ್ದಾರೆ.

ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ?

ಗಡಿ ಜಿಲ್ಲೆ ಬೀದರ್, ಕಾರವಾರ ಮತ್ತು ಬೆಳಗಾವಿಯಲ್ಲಿ AQI ಪ್ರಮಾಣ 135 ರಿಂದ 156ರ ಆಸುಪಾಸಿನಲ್ಲಿದ್ದು, ಗಾಳಿ ಸಾಕಷ್ಟು ಕಲುಷಿತಗೊಂಡಿದೆ. ಕರಾವಳಿ ನಗರಿ ಮಂಗಳೂರು ಹಾಗೂ ಹಾವೇರಿಯಲ್ಲೂ ಧೂಳಿನ ಪ್ರಮಾಣ ತುಸು ಹೆಚ್ಚಾಗಿಯೇ ಇದೆ. ಇನ್ನು, ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ವಾಯು ಗುಣಮಟ್ಟ 120 ರಿಂದ 138ರ ನಡುವೆ ದಾಖಲಾಗಿದೆ. ಇತ್ತ ಧಾರವಾಡ ಮತ್ತು ಬಾಗಲಕೋಟೆಯಲ್ಲಿ AQI 130 ರಿಂದ 134ರಷ್ಟಿದ್ದು, ಮಧ್ಯಮ ಸ್ಥಿತಿಯಲ್ಲಿದೆ.

ಇದನ್ನೂ ಓದಿ:

ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಲೆನಾಡು ಭಾಗದಲ್ಲಿ ಪರಿಸರ ಅತ್ಯಂತ ಸ್ವಚ್ಛವಾಗಿದ್ದು, AQI 70 ರಿಂದ 110ರ ಒಳಗಿದೆ. ಹಾಗೆಯೇ ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಹಾಸನ ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, ಜನರು ನೆಮ್ಮದಿಯಿಂದ ಶುದ್ಧ ಗಾಳಿ ಸೇವಿಸುವಂತಾಗಿದೆ.

Must Read

Skip to toolbar