Budget 2023 | ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಇದೊಂದು ಐತಿಹಾಸಿಕ ಬಜೆಟ್ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ..

  • ಮಹಿಳಾ ಸ್ವಸಹಾಯ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು, ಮಹಿಳೆಯರಿಗಾಗಿ ಸಾಕಷ್ಟು ವಿಶೇಷ ಉಳಿತಾಯ ಯೋಜನೆ.
  • ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ ಬಜೆಟ್, ಕೃಷಿ ಜತೆಗೆ ಮೀನುಗಾರಿಕೆ ಬಗ್ಗೆಯೂ ಗಮನಹರಿಸಲಾಗಿದೆ. ಹೊಸ ಪ್ರಾಥಮಿಕ ಸಹಕಾರ ಸಂಘಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.
  • ರೈತರಿಗೆ ಡಿಜಿಟಲ್ ಆರ್ಥಿಕತೆ ಲಾಭ ತಿಳಿಸಲು ಬಜೆಟ್‌ನಲ್ಲಿ ಡಿಜಿಟಲ್ ಅಗ್ರಿಕಲ್ಚರ್ ಮೂಲಸೌಕರ್ಯಕ್ಕೆ ಯೋಜನೆ ರೂಪಿಸಲಾಗಿದೆ.
  • ಸಿರಿಧಾನ್ಯದಿಂದ ಬರುವ ಎಲ್ಲಾ ಲಾಭರೈತರ ಕೈ ಸೇರಬೇಕು. ಹಾಗಾಗಿ ಶ್ರೀ ಅನ್ನ ಎನ್ನುವ ಸೂಪರ್ ಫುಡ್ ಘೋಷಣೆ ಮಾಡಲಾಗಿದೆ.
  • ಪರಿಸರ, ತಂತ್ರಜ್ಞಾನ, ಹಸಿರು ಉದ್ಯೋಗಕ್ಕೆ ಪೂರಕ ಬಜೆಟ್ರ
  • ರಸ್ತೆ, ರೈಲು, ಜಲ ಮಾರ್ಗ, ಮೂಲಸೌಕರ್ಯಕ್ಕೆ ಒತ್ತು ನೀಡುವ ಬಜೆಟ್ಯು
  • ಯುವ ಪೀಳಿಗೆಗೆ ಉದ್ಯೋಗವಕಾಶ, ಹೂಡಿಕೆಗೆ ಮುಕ್ತ ಅವಕಾಶ, ಆರ್ಥಿಕತೆಗೆ ಹೊಸ ವೇಗ.
  • ಮಧ್ಯಮ ವರ್ಗಕ್ಕೆ ಶಕ್ತಿ ತುಂಬಲು ನಾನಾ ಕ್ರಮ, ವೇತನದಾರರಿಗೆ ನೀಡಿರುವ ತೆರಿಗೆ ವಿನಾಯ್ತಿಯಿಂದ ಲಾಭ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!