ಸಾಮಾಗ್ರಿಗಳು
ಬಾಳೆಕಾಯಿ
ರವೆ
ಅಕ್ಕಿ ಹಿಟ್ಟು
ಮೆಣಸಿನ ಪುಡಿ
ಧನಿಯಾ ಪುಡಿ
ಜೀರಿಗೆ ಪುಡಿ
ಉಪ್ಪು
ಎಣ್ಣೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ತಯಾರಿಸುವ ವಿಧಾನ:
ಮೊದಲು ಬಾಳೆಕಾಯಿಯ ಸಿಪ್ಪೆ ತೆಗೆದು ತೆಳುವಾಗಿ ವೃತ್ತಾಕಾರದ ತುಂಡುಗಳಾಗಿ ಕತ್ತರಿಸಿ. ತುಂಡುಗಳನ್ನು ಉಪ್ಪು ಹಾಕಿದ ನೀರಿನಲ್ಲಿ 5 ನಿಮಿಷ ನೆನೆಸಿಟ್ಟು ನಂತರ ನೀರು ಚೆನ್ನಾಗಿ ಹಿಂಡಿ ತೆಗೆದುಬಿಡಿ.
ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
ಬಾಳೆಕಾಯಿ ತುಂಡುಗಳನ್ನು ಈ ಮಿಶ್ರಣದಲ್ಲಿ ಚೆನ್ನಾಗಿ ಉರುಳಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ.



