ಮಕ್ಕಳಿಗೆ ಇಂತಹ ಅನುಭವಗಳನ್ನು ನೀಡೋದ್ರಲ್ಲಿ ಖುಷಿ ಇದೆ- ನಟ ಅಕ್ಷಯ್‌ ಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಗೆ ಫ್ಯಾಮಿಲಿ ಜೊತೆ ಕಾಲ ಕಳೆಯೋದು ಅಂದ್ರೆ ತುಂಬಾ ಇಷ್ಟ. ಕೆಲಸದ ಸಮಯದ ನಂತರ ಫ್ಯಾಮಿಲಿ ಜತೆ ಕಾಲ ಕಳೆಯೋ ನಟ ಈಗ ಮಗಳೊಂದಿಗೆ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿದ್ದಾರೆ.
ಕುಟುಂಬದೊಂದಗೆ ಕಾಲ ಕಳೆಯುತ್ತಿರುವ ಅಕ್ಷಯ್‌, ಗೋಮಾನೆಗೆ ಆಹಾರ ಉಳಿಸಿ, ಅವುಗಳನ್ನು ಮುದ್ದಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿರುವ ಅವರು, ʼಈ ಮಣ್ಣಿನ ಘಮ, ಗೋವುಗಳಿಗೆ ಆಹಾರ ನೀಡೋದು, ಮರಗಳಿಂದ ಬೀಸುವ ತಂಪಾದ ಗಾಳಿ.. ಇವುಗಳ ಅನುಭವನ್ನು ಮಕ್ಕಳಿಗೆ ನೀಡುವುದರಲ್ಲಿ ಏನೋ ಒಂಥರಾ ಖುಷಿ ಇದೆ. ನಾಳೆ ಆಕೆಗೆ ಕಾಡಿನಲ್ಲಿ ಹುಲಿ ಕಂಡಾಗ ಇನ್ನೂ ಸಂತೋಷವಾಗಲಿದೆ. ಸುಂದರವಾದ ರಣಥಂಬೋರ್​ ಉದ್ಯಾನವನಕ್ಕೆ ಭೇಟಿ ನೀಡಿದ್ದೇವೆ. ಈ ಅದ್ಭುತವಾದ ಸ್ಥಳಗಳನ್ನು ನೀಡಿದ ದೇವರಿಗೆ ಧನ್ಯವಾದಗಳು’ ಎಂದು ಅಕ್ಷಯ್​ ಕುಮಾರ್​ ಬರೆದುಕೊಂಡಿದ್ದಾರೆ.
ಅಕ್ಷಯ್‌ ಕುಮಾರ್‌ ಹಾಗೂ ಟ್ವಿಂಕಲ್‌ ಖನ್ನಾಗೆ ಇಬ್ಬರು ಮಕ್ಕಳು. ಪುತ್ರ ಆರವ್‌ ಲಂಡನ್‌ ನಲ್ಲಿ ಓದುತ್ತಿದ್ದಾನೆ. ಪುತ್ರಿ ನಿತಾರಾಗೆ ಇನ್ನು 9 ವರ್ಷ. ಮಗಳೊಂದಿಗೆ ಕಾಲ ಕಳೆಯುತ್ತಿರುವ ನಟ ಅಕ್ಷಯ್‌ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!