ಈ ಎಲ್ಲ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವ ಮಹಿಳೆ ಸದಾ ಖುಷಿಯಾಗಿರುತ್ತಾಳಂತೆ, ಯಾವ ವಿಷಯ ನೋಡಿ…

ಹೆಣ್ಣುಮಕ್ಕಳು ಎಲ್ಲ ವಿಷಯಕ್ಕೂ ತಲೆ ಕೆಡಿಸಿಕೊಳ್ಳುತ್ತಾರೆ. ಅವರೊಂದು ರೀತಿ ಸೂಕ್ಷ್ಮ ಜೀವಿ ಅಂತ ಹೇಳಬಹುದು. ಆದರೆ ಒಂದು ಬಾರಿ ಕೆಲವು ವಿಷಯಗಳನ್ನು ಆಕೆ ಇಗ್ನೋರ್ ಮಾಡಿ ಸುಮ್ಮನಾಗಿಬಿಟ್ಟರೆ ಅವಳಷ್ಟು ಖುಷಿಯಾಗಿ ಯಾರಿಗೂ ಇರೋಕೆ ಸಾಧ್ಯವಿಲ್ಲ. ಯಾವ ವಿಷಯಗಳು ನೋಡಿ..

  • ಯಾವ ರೀತಿ ಬಟ್ಟೆ ಹಾಕಿದ್ದೇನೆ, ಈ ಥರ ಬಟ್ಟೆ ಹಾಕಿದರೆ ಜನ ನನ್ನನ್ನು ಹೇಗೆ ನೋಡುತ್ತಾರೆ.
  • ತನ್ನ ಅಂಗಾಂಗಳ ಬಗ್ಗೆ ಕಾನ್ಷಿಯಸ್ ಆಗುವುದು, ಕಾಲು ದಪ್ಪ ಇದೆ, ಕೈ ಸಣ್ಣ ಇದೆ ಹೀಗೆ ಬಾಡಿ ಕಾನ್ಷಿಯಸ್ ಆಗಬಾರದು.
  • ಹುಡುಗನನ್ನು ಇಂಪ್ರೆಸ್ ಮಾಡೋದು ಹೇಗೆ ಎನ್ನುವ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನೀವು ಇರುವ ರೀತಿಗೆ ನಿಮ್ಮನ್ನು ಇಷ್ಟಪಟ್ಟು ಬರುವ ಹುಡುಗ ಇದ್ದೇ ಇರುತ್ತಾನೆ.
  • ಹೊಸ ಬಟ್ಟೆಗಳಿಲ್ಲ, ಫ್ಯಾನ್ಸಿ ಮೊಬೈಲ್ ಇಲ್ಲ, ಹಾಕಿದ ಬಟ್ಟೆಯನ್ನೇ ಮತ್ತೆ ಹಾಕುತ್ತೇನೆ ಎಂದು ಯೋಚಿಸಬೇಡಿ, ನಿಮ್ಮ ಬಟ್ಟೆ ನಿಮ್ಮ ಇಷ್ಟ.
  • ನಿಮ್ಮ ಮಾತಿನಿಂದ ಇತರರಿಗೆ ನೋವಾಯ್ತಾ? ಓವರ್ ಥಿಂಕ್ ಮಾಡಬೇಡಿ. ನೋವಾಗಿದ್ದರೆ ಸಾರಿ ಕೇಳಿ. ಆದರೆ ಅದರ ಬಗ್ಗೆಯೇ ಯೋಚನೆ ಮಾಡಿ ಸಮಯ ಹಾಳು ಮಾಡಬೇಡಿ.
  • ಬೋಲ್ಡ್ ಆದ ಕೆಲಸ ಮಾಡುವ ಮುನ್ನ ಜನ ಏನೆನ್ನುತ್ತಾರೆ ಯೋಚಿಸಬೇಡಿ. ಗೆದ್ದ ಮೇಲೆ ಎಲ್ಲರಿಗೂ ನೀವು ಇಷ್ಟ.
  • ಎಲ್ಲವನ್ನೂ ಸಹಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅನಿವಾರ್ಯವಿದ್ದಾಗ ಎದುರು ಮಾತನಾಡಿ, ನಿಮ್ಮ ಮಾತಿನಲ್ಲಿ ತೂಕವಿದ್ದರೆ ಸಾಕು.
  • ಯಾವುದೇ ವಿಷಯದಲ್ಲೂ ಕೀಳಿರಿಮೆ ಬೇಡ, ನೀವು ನಿಮ್ಮದೇ ರೀತಿಯಲ್ಲಿ ಸ್ಪೆಷಲ್.
  • ಬೇರೆಯವರನ್ನು ನೋಡಿ ಹೊಟ್ಟೆ ಕಿಚ್ಚು ಪಡಬೇಡಿ, ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಪಟ್ಟ ನೂರಾರು ಮಂದಿ ಇರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!