ಬಾಯಿ ಹುಣ್ಣಿಗೆ ಇಲ್ಲಿದೆ ಮನೆಮದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅನೇಕರು ಬಾಯಿ ಹುಣ್ಣು ಅಂದ್ರೆ ತುಂಬಾನೆ ದೊಡ್ಡ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ಇದೊಂದು ಸಾಧಾರಣ ಸಮಸ್ಯೆಯಾಗಿದ್ದು, ಈ ಸಮಸ್ಯೆ ಹಲವರಿಗೆ ಮೇಲಿಂದ ಮೇಲೆ ಕಾಡುತ್ತದೆ. ಇನ್ನು ಕೆಲವರಿಗೆ 2-3 ತಿಂಗಳಿಗೊಮ್ಮೆ ಕಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಮಾತನಾಡಲು, ತಿನ್ನಲು ಸಹ ಕಷ್ಟವಾಗುತ್ತದೆ. ಈ ಹುಣ್ಣುಗಳು ಹೆಚ್ಚಾಗಿ ಒಸಡಿನ ಮೇಲೆ ಹಾಗೂ ನಾಲಿಗೆ ಬದಿಯಲ್ಲಿ ಕಂಡು ಬರುತ್ತವೆ. ಇವು ಅಲ್ಪಾವಧಿ ಹಾಗೂ ದೀರ್ಘಾವಧಿಯವರೆಗೆ ಕಾಡುತ್ತವೆ. ಬಾಯಿ ಹುಣ್ಣಿನಿಂದ ಮುಕ್ತಿ ಕಾಣಲು ಮನೆಮದ್ದುಗಳು ಇಲ್ಲಿವೆ.

* ಬೆಳಿಗ್ಗೆ ಹಲ್ಲುಜ್ಜಿದ ಬಳಿಕ ಶುದ್ಧವಾದ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು. ಇದು ಬಾಯಿಯಲ್ಲಿ ಆಗಿರುವಂತಹ ಹುಣ್ಣನ್ನು ಶಮನ ಮಾಡುತ್ತದೆ.

* ಊಟದಲ್ಲಿ ಜಾಸ್ತಿ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಅಲ್ಲದೇ ಕಾಫಿ, ಆಲ್ಕೋಹಾಲ್ ಮತ್ತು ತಂಪು ಪಾನೀಯವನ್ನ ತ್ಯಜಿಸಬೇಕು. ಜಂಕ್​ಫುಡ್​ ತಿನ್ನಬೇಡಿ ಹಾಗೂ ಸರಿಯಾಗಿ ನೀರು ಕುಡಿಯಿರಿ. ಹೀಗೆ ಮಾಡಿದರೆ ಬಾಯಿಯ ಹುಣ್ಣು ದೂರವಾಗಲಿದೆ.

* ವಿಟಮಿನ್ B1 ಮತ್ತು B12, ಸತು ಮತ್ತು ಕಬ್ಬಿಣಾಂಶವನ್ನು ಹೊಂದಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಏಕೆಂದರೆ ಕೆಲವೊಮ್ಮೆ ವಿಟಮಿನ್ ಕೊರತೆಯಿಂದಾಗಿ ಬಾಯಿಯಲ್ಲಿ ಹುಣ್ಣು ಆಗಬಹುದು.

* ಅರಿಶಿನವನ್ನು ಹುಣ್ಣಾಗಿರುವ ಜಾಗಕ್ಕೆ ಲೇಪಿಸುವುದರಿಂದ ಇದು ನೋವನ್ನು ಕಡಿಮೆ ಮಾಡುತ್ತದೆ.

* ಒಂದು ಚಮಚ ಉಪ್ಪನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ, ಪ್ರತಿದಿನ 2-3 ಬಾರಿ ಮುಕ್ಕಳಿಸುವುದರಿಂದ ಬಾಯಿಹುಣ್ಣಿನ ನೋವು ಹಾಗೂ ಹುಣ್ಣು ವಾಸಿಯಾಗುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!