HEALTH | ಬಾಯಿಹುಣ್ಣು ಶಮನಕ್ಕೆ ಇಲ್ಲಿದೆ ಮನೆ ಮದ್ದು…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾತಾವರಣದಲ್ಲಿನ ಬಂದಲಾವಣೆಯಿಂದ ಇಂದು ಬಾಯಿ ಹುಣ್ಣು ಪ್ರತಿಯೊಬ್ಬರ ಸಾಮಾನ್ಯ ಸಮಸ್ಯೆಯಾಗಿದೆ. ಪೋಷಕಾಂಶ ಆಹಾರದ ಕೊರತೆಯಿಂದಾಗಿ ಅಥವಾ ಬಾಯಿ ಸ್ವಚ್ಛವಾಗಿಟ್ಟುಕೊಳ್ಳದೇ ಇರುವ ಸಂದರ್ಭ ಬಾಯಿಹುಣ್ಣು ಬಾಧಿಸುತ್ತದೆ.

ಕೆನ್ನೆಯ ಒಳಭಾಗ, ತುಟಿಗಳ ಮೇಲೆ ಮತ್ತು ನಾಲಿಗೆಯಲ್ಲಿ ಹುಣ್ಣುಗಳಾಗಿ ಬದಲಾಗುತ್ತದೆ. ಇದರಿಂದ ಆಹಾರ ಸೇವನೆ, ಮಾತನಾಡುವಾಗ ನೋವು ಊಂಟು ಮಾಡುತ್ತವೆ.

ಒಮ್ಮೆ ಈ ಬಾಯಿ ಹುಣ್ಣು ಕಾಣಿಸಿಕೊಂಡರೆ ವಿಪರೀತ ನೋವು ಮತ್ತು ಹಿಂಸೆಯನ್ನು ಉಂಟು ಮಾಡುತ್ತದೆ. ಏನನ್ನು ತಿನ್ನಲೂ ಸಾಧ್ಯವಾಗದಷ್ಟು ಉರಿ ಕಾಣಿಸಿಕೊಳ್ಳುತ್ತದೆ. ಒತ್ತಡ, ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೂಡ ಈ ಗುಳ್ಳೆ ಕಾಣಿಸಿಕೊಳ್ಳುತ್ತದೆ.

ಇದಕ್ಕಾಗಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ತಾತ್ಕಾಲಿಕವಾಗಿ ನಿವಾರಿಸಲು ಉಗುರುಬೆಚ್ಚಗಿನ ನೀರು ಮತ್ತು ಚಿಟಿಕೆ ಉಪ್ಪಿನಿಂದ ನಿಮ್ಮ ಬಾಯಿಯನ್ನು ಪ್ರತಿದಿನ ತೊಳೆಯಿರಿ.

ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳಲ್ಲಿ ಹೇರಳವಾಗಿರುವ ವಿಟಮಿನ್ ಸಿ, ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಾಯಿ ಹುಣ್ಣುಗಳನ್ನು ತಡೆಯುತ್ತದೆ.

ಬಾಯಿ ಹುಣ್ಣಿನ ನಿವಾರಣೆಗೆ ಅತ್ತಿಮರದ ತೊಗಟೆ ಉತ್ತಮ ಮನೆಮದ್ದಾಗಿದೆ. ಅತ್ತಿ ಮರದ ತಾಜಾ ತೊಗಟೆಯನ್ನು ತಂದು ಚೆನ್ನಾಗಿ ಸ್ವಚ್ಛಗೊಳಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. 2 ಲೋಟ ನೀರು ಒಂದು ಲೋಟಕ್ಕೆ ಇಳಿಯುವಷ್ಟು ಕುದಿಸಿದ ನಂತರ ಅದನ್ನು ಸೋಸಿಕೊಳ್ಳಿ. ನಂತರ ಅರ್ಧ ಲೋಟ ಅತ್ತಿ ತೊಟಗೆಯನ್ನು ಕುದಿಸಿದ ನೀರಿಗೆ ಚಿಟಿಕೆ ಸಕ್ಕರೆ ಬೆರೆಸಿ ಸೇವನೆ ಮಾಡಿ

ಬಾಯಿ ಹುಣ್ಣನ್ನು ನಿವಾರಿಸಲು ತುಪ್ಪದ ಸೇವನೆ ಒಳ್ಳೆಯದು. ಆಹಾರದಲ್ಲಿ ತುಪ್ಪವನ್ನು ಸೇವನೆ ಮಾಡುವುದಿರಬಹುದು ಅಥವಾ ಬಾಯಿ ಹುಣ್ಣಿನ ಮೇಲೆ ತುಪ್ಪವನ್ನು ಹಚ್ಚುವುದರಿಂದಲೂ ಬಾಯಿಯಲ್ಲಾದ ನೋವಿನ ಹುಣ್ಣು ಕಡಿಮೆಯಾಗುತ್ತದೆ.

ದೇಹವನ್ನು ತಂಪುಗೊಳಿಸಿ ಬಾಯಿ ಹುಣ್ಣುಗಳನ್ನು ನಿವಾರಿಸಲು ಕೊತ್ತಂಬರಿ ಕಾಳುಗಳು ಅತ್ಯುತ್ತಮ ಪದಾರ್ಥವಾಗಿದೆ. ಕೊತ್ತಂಬರಿ ಕಾಳುಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು.

ಅಲೋವೆರಾ ಜ್ಯೂಸ್‌ನ್ನು ಸೇವನೆ ಮಾಡುವುದರಿಂದ ಬಾಯಿ ಹುಣ್ಣನ್ನು ನಿವಾರಿಸಬಹುದಾಗಿದೆ. ಅಲ್ಲದೆ ಅಲೋವೇರಾವನ್ನು ನೆತ್ತಿಯ ಮೇಲೆ ಹಾಕಿಕೊಳ್ಳುವುದರಿಂದಲೂ ದೇಹ ತಂಪಾಗಿ ಬಾಯಿ ಹುಣ್ಣನ್ನು ಗುಣಪಡಿಸಬಹುದಾಗಿದೆ.

ಬಾಯಿಯ ಹುಣ್ಣಿನ ನಿವಾರಣೆಗೆ ಪೇರಳೆ ಮರದ ಎಳೆಯ ಎಲೆಗಳು ಸಹಾಯಕವಾಗಿದೆ. ಪೇರಳೆ ಎಲೆಯ ಚಿಗುರನ್ನು ತಂದು ನೀರಿನಲ್ಲಿ ಕುದಿಸಿ, ಕಷಾಯದ ರೀತಿಯಲ್ಲಿ ಸೇವನೆ ಮಾಡುವುದರಿಂದ ಒಂದೇ ದಿನದಲ್ಲಿ ಬಾಯಿ ಹುಣ್ಣನ್ನು ನಿವಾರಣೆ ಮಾಡಬಹುದಾಗಿದೆ.

ತೆಂಗಿನ ಎಣ್ಣೆಯು ನೈಸರ್ಗಿಕ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಕೊಬ್ಬರಿ ಎಣ್ಣೆಯನ್ನು ಹುಣ್ಣಿನ ಮೇಲೆ ಹಚ್ಚುವುದರಿಂದ ಬಾಯಿ ಹುಣ್ಣು ತಕ್ಷಣವೇ ಶಮನವಾಗುತ್ತದೆ. ನಿಯಮಿತವಾಗಿ ದಂತ ತಪಾಸಣೆಗಳನ್ನು ಮಾಡಿ. ಚಾಕೊಲೇಟ್ ಮತ್ತು ಧೂಮಪಾನದಂತಹ ವಸ್ತುಗಳಿಂದ ದೂರವಿದ್ದರೆ ಉತ್ತಮ….

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!