HEALTH| ಆಗ್ಗಾಗ್ಗೆ ಕಾಣಿಸಿಕೊಳ್ಳುವ ಕಿವಿ ನೋವಿಗೆ ಮನೆಮದ್ದುಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರೋಗ್ಯದ ಕಾಳಜಿ ತುಂಬಾನೆ ಪ್ರಮುಖ ಪಾತ್ರವಹಿಸುತ್ತದೆ. ಒಮ್ಮೆಲೇ ಯಾವುದಾದ್ರು ಸಮಸ್ಯೆ ಎದುರಾದ್ರೆ ಏನಪ್ಪಾ ಮಾಡೋದು ಅಂದಾಗ ನೆನಪಾಗೋದೇ ಮನೆಮದ್ದುಗಳು. ಹಾಗಾಗಿ ಒಂದು ವೇಳೆ ನಿಮಗೆ ಆಗ್ಗಾಗ್ಗೆ ಕಿವಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ಈ ಮನೆಮದ್ದುಗಳನ್ನು ಬಳಸಿ ತಕ್ಷಣವೇ ಪರಿಹಾರ ಕಂಡುಕೊಳ್ಳಿ.

ವಾರ್ಮ್ ಕಂಪ್ರೆಸ್:

ಒಂದು ಬಟ್ಟೆ ತೆಗೆದುಕೊಂಡು ಬಿಸಿ ನೀರಿಗೆ ಅದ್ದಿ, ನೀರನ್ನು ಹಿಂಡಿ ಅದನ್ನು ನೋವು ಇರುವ ಕಿವಿಯ ಹಿಂಬದಿಗೆ ಒತ್ತಿರಿ. ಈ ರೀತಿ 10-15 ನಿಮಿಷ ಒತ್ತಿ ಹಿಡಿದರೆ ನೋವು ಸ್ವಲ್ಪ ಕಡಿಮೆಯಾಗುವುದು.

ತೆಂಗಿನ ಎಣ್ಣೆ:

ತೆಂಗಿನೆಣ್ಣೆ ಸ್ವಲ್ಪ ಬಿಸಿ ಮಾಡಿ ನಂತರ ಒಂದರಿಂದ ಎರಡು ಹನಿ ಕಿವಿಗೆ ಹಾಕಿದರೆ ಗಟ್ಟಿಯಾಗಿರುವ ಕಿವಿಯ ಗುಗ್ಗೆ ಮೃದುವಾಗುವುದು. ಅದನ್ನು ಹೊರ ತೆಗೆದರೆ ನೋವು ಕಡಿಮೆಯಾಗುವುದು.

ಬೆಳ್ಳುಳ್ಳಿ ಎಣ್ಣೆ:

ಎಣ್ಣೆಯನ್ನು ಕಾಯಿಸಿ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ 30 ನಿಮಿಷ ಹಾಗೆಯೇ ಬಿಡಿ, ನಂತರ ಅದನ್ನು ಬಟ್ಟೆ ತುಂಡಿನಿಂದ ಸೋಸಿ ಆ ಎಣ್ಣೆಯನ್ನು ಕಿವಿಗೆ ಎರಡು ಹನಿ ಹಾಕಿ. ಹೀಗೆ ಮಾಡಿದರೆ ಕಿವಿ ನೋವು ಕಡಿಮೆಯಾಗುವುದು.

ಈರುಳ್ಳಿ ಬಳಸಿ:

ಈರುಳ್ಳಿಯನ್ನು ಕತ್ತರಿಸಿ ಅದನ್ನು ಪ್ಯಾನ್‌ನಲ್ಲಿ ಹಾಕಿ ಬಿಸಿ ಮಾಡಿ, ನಂತರ ಆ ಬಿಸಿ ಈರುಳ್ಳಿಯನ್ನು ಒಂದು ಕರ್ಚೀಫ್‌ನಲ್ಲಿ ಹಾಕಿ ಕಟ್ಟಿ ಅದನ್ನು ನೋವು ಇರುವ ಕಿವಿಯ ಹಿಂಬದಿಗೆ ಹಿಡಿಯಿರಿ. ಹೀಗೆ ಮಾಡುವುದರಿಂದ ಏನಾದರೂ ಶೀತದಿಂದಾಗಿ ಕಿವಿ ನೋವಾಗುತ್ತಿದ್ದರೆ ಅದು ಕಡಿಮೆಯಾಗುವುದು.

ಹಬೆ ತೆಗೆದುಕೊಳ್ಳಿ:

ಕಿವಿ ನೋವು ಇದ್ದಾಗ ಸ್ಟೀಮ್‌ ತೆಗೆದುಕೊಂಡರೆ ನೋವು ಸ್ವಲ್ಪ ಕಡಿಮೆಯಾಗುವುದು.

ತುಂಬಾ ನೋವು ಇದ್ದಾಗ ನಿಮ್ಮ ವೈದ್ಯರ ಸಲಹೆ ಮೇರೆಗೆ ನೋವು ನಿವಾರಕಗಳನ್ನು ತೆಗೆದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!