ಬೇಕಾಗುವ ಸಾಮಗ್ರಿಗಳು:
2 ಬೀನ್ಸ್
2 ಕ್ಯಾರೆಟ್
1 ಕಟ್ ಪಾಲಕ್ ಸೊಪ್ಪು
2 ನೀರುಳ್ಳಿ
ಬೆಳ್ಳುಳ್ಳಿ
ಶುಂಠಿ
ಪುದೀನ
ಹಸಿರುಮೆಣಸಿನಕಾಯಿ
ಪಲಾವ್ ಎಲೆ
ಟೊಮ್ಯಾಟೊ
ಅನ್ನ
ಚಕ್ರಮೊಗ್ಗು
ಸೋಂಪು ಕಾಳು
ಜಿರೀಗೆ
ಚಕ್ಕೆ
ಲವಂಗ
ಏಲಕ್ಕಿ
ಮಾಡುವ ವಿಧಾನ:
ಮೊದಲಿಗೆ ಕ್ಯಾರೆಟ್, ಬೀನ್ಸ್ ಬೇಯಿಸಿಕೊಳ್ಳಿ, ಪಾಲಕ್ ಬೇಯಿಸಿ ಇಟ್ಟುಕೊಳ್ಳಿ. ಬಾಸುಮತಿ ಅಕ್ಕಿ ಅನ್ನ ಮಾಡಿಕೊಳ್ಳಿ.
ಮಿಕ್ಸಿ ಜಾರ್ನಲ್ಲಿ ಹಸಿರುಮೆಣಸಿನಕಾಯಿ ಬೆಳ್ಳುಳ್ಳಿ, ಶುಂಠಿ,ಪುದೀನ, ಈರುಳ್ಳಿ, ಬೇಯಿಸಿದ ಪಾಲಕ್ನ್ನು ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಪಲಾವ್ ಎಲೆ, ಸೋಂಪು,ಜೀರಿಗೆ, ಚಕ್ಕೆ, ಲವಂಗ,ಏಲಕ್ಕಿ, ಚಕ್ರಮೊಗ್ಗು, ಸಣ್ಣದಾಗಿ ಹೆಚ್ಚಿದ ಈರುಳ್ಳಿ,ಟೊಮ್ಯೊಟೊ,ಅರಿಶಿನ,ಬಟಾಣಿ,ಅಚ್ಚ ಖಾರದಪುಡಿ,ಜೀರಿಗೆ ಪುಡಿ,ಬೇಯಿಸಿದ ತರಕಾರಿ, ರುಬ್ಬಿದ ಮಸಾಲಾ, ದನಿಯಾಪುಡಿ, ರುಚಿಗೆ ತಕ್ಕಷ್ಷು ಉಪ್ಪು ಎಲ್ಲ ಹಾಕಿ ಹಸಿ ವಾಸನೆ ಹೋಗುವ ತನಕ ಬೇಯಿಸಿಕೊಳ್ಳಿ.
ನಂತರ ಮೊದಲೇ ಮಾಡಿದ ಅನ್ನಕ್ಕೆ ಕಲಸಿಕೊಳ್ಳಿ ಸ್ವಲ್ಪ ನಿಂಬೆರಸ ಸೇರಿಸಿ ಕಲಸಿ ರುಚಿ-ರುಚಿಯಾದ ಹೈದ್ರಾಬಾದ್ ಪಾಲಕ್ ವೆಜಿಟೆಬಲ್ ಬಿರಿಯಾನಿ ಸವಿಯಲು ಸಿದ್ಧ.