CINE | ಹೇಳದೇ ಕೇಳದೆ ʼಕಣ್ಮಣಿʼ ಹಾಡನ್ನು ಬಳಸಿಕೊಳ್ಳಲಾಗಿದೆ, ಮಂಜುಮ್ಮೇಲ್‌ ಬಾಯ್ಸ್‌ ಮೇಲೆ ಇಳಯರಾಜ ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಲಯಾಳಂನ ಸೂಪರ್ ಹಿಟ್ ಸಿನಿಮಾ ಮಂಜುಮೇಲ್ ಬಾಯ್ಸ್‌ನ ಕಣ್ಮಣಿ ಹಾಡಿಗೆ ಸಪರೇಟ್‌ ಫ್ಯಾನ್‌ ಬೇಸ್‌ ಇದೆ, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸೂಪರ್‌ ಹಿಟ್‌ ಆಗಿದೆ. ಇದೀಗ ಈ ಹಾಡು ನನ್ನದು ಎಂದು ಸಂಗೀತ ಮಾಂತ್ರಿಕ ಇಳಯರಾಜ ಹೇಳುತ್ತಿದ್ದಾರೆ.

ಗುಣ ಸಿನಿಮಾದ ಹಾಡನ್ನು ಈ ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಗುಣ ಚಿತ್ರದ ಸಂಗೀತ ಸಂಯೋಜಕ ಇಳಯರಾಜ ಅವರು ಆರೋಪ ಮಾಡಿದ್ದಾರೆ.

ಗುಣ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ಕಣ್ಮಣಿ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ಜನರು ಸಖತ್ ಇಷ್ಟಪ್ಟರು. ಈ ಹಾಡು ಮಂಜುಮ್ಮೇಲ್ ಬಾಯ್ಸ್ನಲ್ಲಿ ಬಳಕೆ ಆಗಿದೆ. ಆದರೆ, ಇದನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!