ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಕಾರಿ ಮತ್ತು ಹಣ್ಣುಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾನೆ ಅಗತ್ಯ. ಆದರೆ ಕೆಲವರಿಗೆ ಕೆಲವು ತರಕಾರಿ, ಹಣ್ಣುಗಳು ಇಷ್ಟಾನೆ ಆಗೋದಿಲ್ಲ. ಈ ಪೈಕಿ ಅನೇಕರು ಆಲೂಗಡ್ಡೆ ಅಂದ್ರೆ ಸಾಕು ಮೂಗು ಮುರಿಯುತ್ತಾರೆ. ಅಂತವರು ಒಮ್ಮೆ ಈ ಆಲೂ ಚಕ್ಕುಲಿಯನ್ನು ಸವಿದರೆ ಸಾಕು ಇನ್ಮುಂದೆ ಆಲೂ ತಿಂತೀವಿ ಅಂತಾರೆ ನೋಡಿ…
ಬೇಕಾಗುವ ಪದಾರ್ಥಗಳು:
ಬೇಯಿಸಿದ ಆಲೂಗಡ್ಡೆ
ನೀರು
ಅಕ್ಕಿ ಹಿಟ್ಟು
ಕಡಲೆ ಹಿಟ್ಟು
ಅರಿಶಿನ
ಮೆಣಸಿನ ಪುಡಿ
ಜೀರಿಗೆ
ಉಪ್ಪು
ಬೆಣ್ಣೆ
ಎಣ್ಣೆ
ಮಾಡುವ ವಿಧಾನ :
ಮೊದಲು ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆಯನ್ನು ತೆಗೆದು ಬಳಿಕ ಕತ್ತರಿಸಿ ಮಿಕ್ಸಿಗೆ ಹಾಕಿ, 2 ಚಮಚ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಕಡಲೆಹಿಟ್ಟು ಸೇರಿಸಿ ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದಕ್ಕೆ ಒಂದು ಚಮಚ ಬೆಣ್ಣೆ, ತಯಾರಿಸಿದ ಆಲೂಗಡ್ಡೆ ಪೇಸ್ಟ್ ಸೇರಿಸಿ ಚೆನ್ನಾಗಿ ಕಲೆಸಿ. ಈಗ ಅಗತ್ಯವಿರುವಷ್ಟು ನೀರನ್ನು ಬೆರೆಸಿಕೊಳ್ಳಿ. ಹಿಟ್ಟು ತುಂಬಾ ಮೃದುವಾಗಿದ್ದರೆ ಚಕ್ಕುಲಿ ಹದವಾಗಿ ಬರುತ್ತದೆ, ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಒತ್ತುವಾಗ ಒಡೆಯುತ್ತದೆ.
ಈ ಮಿಶ್ರಣವನ್ನು ಚಕ್ಕುಲಿ ಹಾಕುವ ಅಚ್ಚಿಗೆ ಹಾಕಿಕೊಂಡು, ನಿಧಾನವಾಗಿ ಬಿಸಿ ಎಣ್ಣೆ ಬಾಣಲೆಗೆ ಒತ್ತಿ ಹಾಕಿ. ನಂತರ ಗೋಲ್ಡನ್ ಬ್ರೌನ್ ಆಗುವವರೆಗೂ ಹುರಿಯಿರಿ. ನಂತರ ಆಲೂ ಚಕ್ಕುಲಿಯನ್ನು ಸವಿಯಿರಿ.