RECIPE| ಬೆಂಗಾಲಿ ಆಲೂ ಗಸಗಸೆ ಪಲ್ಯ ಮಾಡಿ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಆಲೂಗಡ್ಡೆ
ಈರುಳ್ಳಿ
ಹಸಿರು ಮೆಣಸಿನಕಾಯಿ
ಗಸಗಸೆ
ಕರಿ ಜೀರಿಗೆ
ಅರಿಶಿಣ
ಎಣ್ಣೆ
ಪಲಾವ್ ಎಲೆ
ಉಪ್ಪು

ಮಾಡುವ ವಿಧಾನ:

* ಎರಡು ಗಂಟೆಗಳ ಕಾಲ ಗಸಗಸೆಯನ್ನು ನೀರಿನಲ್ಲಿ ನೆನೆಸಿಡಿ.
* ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
* ನೆನೆಸಿಟ್ಟಿದ್ದ ಗಸಗಸೆ ಮತ್ತು ಹಸಿರು ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ.
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಬಿಸಿಯಾಗುತ್ತಿದ್ದಂತೆ ಅದಕ್ಕೆ ಪಲಾವ್ ಎಲೆ ಮತ್ತು ಕರಿ ಜೀರಿಗೆಯನ್ನು ಹಾಕಬೇಕು.
* ಒಂದು ನಿಮಿಷದ ನಂತರ ಕತ್ತರಿಸಿದ್ದ ಈರುಳ್ಳಿ ಹಾಕಿ ಬಣ್ಣ ತಿರುಗುವವರೆಗೂ ಹುರಿಯಬೇಕು.
* ಈಗ ಬಾಣಲೆಗೆ ಆಲೂಗಡ್ಡೆಯನ್ನು ಹಾಕಿ ಆಲೂಗಡ್ಡೆ ಫ್ರೈ ಆದ ನಂತರ ರುಬ್ಬಿಕೊಂಡಿದ್ದ ಗಸಗಸೆ ಮತ್ತು ಮೆಣಸಿನ ಕಾಯಿ ಪೇಸ್ಟನ್ನು ಬೆರೆಸಬೇಕು.
* ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ತಿರುಗಿಸಿ 5 ನಿಮಿಷ ಬೇಯಲು ಬಿಡಿ.
* ತದನಂತರ ಸ್ವಲ್ಪ ನೀರು ಸೇರಿಸಿ. ಕಡಿಮೆ ಉರಿಯಲ್ಲಿ ಬೇಯಿಸಿದರೆ ಆಲೂ ಗಸಗಸೆ ಪಲ್ಯ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!