ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ತುಪ್ಪ
ನೀರು
ಬಾದಾಮಿ ಪೇಸ್ಟ್
ಸಕ್ಕರೆ
ಕೇಸರಿ
ಹಾಲು
ಮಾಡುವ ವಿಧಾನ:
* ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಕರಗಿಸಿಕೊಳ್ಳಿ ಹಾಗೂ ಇದನ್ನು ಪಾತ್ರೆಯ ಸುತ್ತಲೂ ಹರಡುವಂತೆ ಮಾಡಿ.
* ಇದೇ ಪಾತ್ರೆಯಲ್ಲಿ ನೀರನ್ನು ಕುದಿಸಿಕೊಳ್ಳಿ, ನಂತರ ಉರಿಯನ್ನು ನಿಲ್ಲಿಸಿ, ಇದಕ್ಕೆ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗುವವರೆಗೆ ಇದನ್ನು ಸಮಮಿಶ್ರಣ ಮಾಡಿಕೊಳ್ಳಿ.
* ಇದೀಗ ಬಾದಾಮಿ ಪೇಸ್ಟ್ ಅನ್ನು ಸೇರಿಸಿಕೊಳ್ಳಿ, ಉಳಿದ ಹಾಲಿಗೆ ಕೇಸರಿಯನ್ನು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
* ಇದು ದಪ್ಪನಾಗುತ್ತಿದ್ದಂತೆ ಪಾತ್ರೆಯ ಬದಿ ಒಣಗುತ್ತದೆ, ಎಲ್ಲಾ ತುಪ್ಪವನ್ನು ಇದಕ್ಕೆ ಹಾಕಿ ಮತ್ತು 10 ನಿಮಿಷ ಇದನ್ನು ಬೇಯಿಸಿಕೊಳ್ಳಿ.
*ಹಲ್ವಾವು ತುಪ್ಪವನ್ನು ಚೆನ್ನಾಗಿ ಹೀರುತ್ತಿರುವಂತೆ ಪಾತ್ರೆಯ ಬದಿಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುವಂತಹ ಪಾಕ ಬಿಡುತ್ತದೆ. ಇದೀಗ ಉರಿಯನ್ನು ನಿಲ್ಲಿಸಿ. ಉಳಿದ ತುಪ್ಪವನ್ನು ಇದಕ್ಕೆ ಸೇರಿಸಿ ಮತ್ತು ಹಲ್ವಾವನ್ನು ಮೆತ್ತಗಾಗಲು ಚೆನ್ನಾಗಿ ಕಲಸಿದರೆ ಸವಿಯಲು ಸಿದ್ಧ.