Sunday, December 10, 2023

Latest Posts

RECIPE| ರುಚಿಯಾದ ಕಡಲೆಹುಡಿ ಮೆಂತೆ ರೋಟಿ ಮಾಡಿ ಸವಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಡಲೆಹುಡಿ ಜೊತೆಗೆ ಮೆಂತೆ ಹಾಕಿ ಮಾಡುವ ರೋಟಿ ತುಂಬಾನೆ ರುಚಿಯಾಗಿರತ್ತೆ. ಹಾಗಾದ್ರೆ ಮತ್ಯಾಕೆ ತಡ ಕೂಡಲೇ ಮಾಡಿ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು:

ಕಡಲೆ ಹಿಟ್ಟು
ಮೆಂತೆ ಸೊಪ್ಪು
ಕೆಂಪು ಮೆಣಸಿನ ಹುಡಿ
ಓಮದ ಬೀಜಗಳು
ಉಪ್ಪು
ತುಪ್ಪ
ಬೆಚ್ಚಗಿನ ನೀರು

ಮಾಡುವ ವಿಧಾನ:

* ಒಂದು ಪಾತ್ರೆಯಲ್ಲಿ ಮೆಂತೆ ಎಲೆಗಳೊಂದಿಗೆ ಕಡಲೆಹುಡಿಯನ್ನು ಹಾಕಿಕೊಳ್ಳಿ.
* ಸ್ವಲ್ಪ ನೀರನ್ನು ಸೇರಿಸಿ ನಾದಿಕೊಳ್ಳಿ.
* ಅದಕ್ಕೆ ಕೆಂಪು ಮೆಣಸಿನ ಹುಡಿ, ಓಮದ ಹುಡಿ ಮತ್ತು ಉಪ್ಪು, ತುಪ್ಪ ಸೇರಿಸಿ.
* ಈಗ ಹಿಟ್ಟು ಮೃದು ಮತ್ತು ನಯವಾಗುವಂತೆ ಕಲಸಿಕೊಳ್ಳಿ.
* ಒಲೆ ಮೇಲೆ ತವಾ ಇಟ್ಟು ಬಿಸಿ ಮಾಡಿಕೊಳ್ಳಿ.

* ಇನ್ನೊಂದೆಡೆ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿಕೊಂಡು ಚಪಾತಿ ಆಕಾರದಲ್ಲಿ ಲಟ್ಟಿಸಿ.
* ಈಗ ತವಾದ ಮೇಲೆ ರೋಟಿ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಸವಿಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!