RECIPE| ರುಚಿ ಜೊತೆಗೆ ಆರೋಗ್ಯಕರವಾದ ಕ್ಯಾಬೇಜ್ ದೋಸೆ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿತ್ಯವೂ ಒಂದೇ ರೀತಿಯ ತಿಂಡಿ ತಿನ್ನುವುದು ಅಂದ್ರೆ ಬೇಜಾರಾಗಬಹುದು. ಹಾಗಾಗಿ ಒಮ್ಮೆ ಟ್ರೈ ಮಾಡಿ ನೋಡಿ ರುಚಿ ಜೊತೆಗೆ ಆರೋಗ್ಯಕರವಾದ ಕ್ಯಾಬೇಜ್‌ ದೋಸೆ.

ಬೇಕಾಗುವ ಸಾಮಾಗ್ರಿಗಳು:

ಅಕ್ಕಿ

ಉದ್ದಿನ ಬೇಳೆ

ಮೆಂತ್ಯೆ

ಒಣ ಮೆಣಸಿನಕಾಯಿ

ತೆಂಗಿನಕಾಯಿ

ಕೊತ್ತಂಬರಿ ಬೀಜ

ಜೀರಿಗೆ

ಬೆಲ್ಲ

ಹುಣಸೆಹಣ್ಣಿನ ತಿರುಳು

ಅರಿಶಿನ

ಉಪ್ಪು

ಕಪ್ ಎಲೆಕೋಸು (ನುಣ್ಣಗೆ ಕತ್ತರಿಸಿದ)

ನೀರು

ಮಾಡುವ ವಿಧಾನ:

* ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯೆ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. 10 ಒಣ ಮೆಣಸಿನಕಾಯಿ ಸೇರಿಸಿ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.

* ಈಗ ಪೇಸ್ಟ್ ತಯಾರಿಸಲು ನೆನೆಸಿದ ಮೆಣಸಿನಕಾಯಿಯನ್ನು ಮಿಕ್ಸಿ ಜಾರ್ ಗೆ ಹಾಕಿ, ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಬೆಲ್ಲ, ಹುಣಸೆಹಣ್ಣಿನ ತಿರುಳು, ಅರಿಶಿನ ಮತ್ತು ಉಪ್ಪು ಹಾಕಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ರುಬ್ಬಿ.

* ನಂತರ ಮಸಾಲಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿಡಿ.

* ಈಗ ಅದೇ ಮಿಕ್ಸಿಗೆ ನೆನೆಸಿದ ಅಕ್ಕಿಯನ್ನು ಹಾಕಿ, ಚೆನ್ನಾಗಿ ರುಬ್ಬಿ. ಅಕ್ಕಿ ಹಿಟ್ಟನ್ನು ಮಸಾಲೆಯ ಮಿಶ್ರಣದ ಬಟ್ಟಲಿಗೆ ಹಾಕಿ.

* ಈಗ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಎಲೆಕೋಸು ಅಥವಾ ಕ್ಯಾಬೇಜ್ ಮತ್ತು ನೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ದೋಸೆ ಹಿಟ್ಟಿನ ಹದಕ್ಕೆ ರೆಡಿಮಾಡಿಕೊಳ್ಳಿ.

* ಪ್ಯಾನ್‌ ಮೇಲೆ ಹಿಟ್ಟನ್ನು ಸುರಿದು, ನಿಧಾನವಾಗಿ ಹರಡಿ ನಂತರ ಚೆನ್ನಾಗಿ ಬೇಯಿಸಿ. ಈಗ ಬಿಸಿಬಿಸಿ ಕ್ಯಾಬೇಜ್ ದೋಸೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!