ಬ್ಯಾಂಕ್‌ ಸಾಲ ವಂಚನೆ ಪ್ರಕರಣ: ನರೇಶ್ ಗೋಯಲ್ ವಿಚಾರಣೆಯಲ್ಲಿ ಆಘಾತಕಾರಿ ಸಂಗತಿಗಳನ್ನು ತೆರೆದಿಟ್ಟ ಇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ತನಿಖೆಯಿಂದ ಕೆಲವು ಆಘಾತಕಾರಿ ಸಂಗತಿಗಳನ್ನು ಇಡಿ ತೆರದಿಟ್ಟಿದೆ. ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಕೆನರಾ ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಆರೋಪಿ ನರೇಶ್ ಗೋಯಲ್ ಅವರನ್ನು ಮುಂಬೈ ಪಿಎಂಎಲ್‌ಎ ನ್ಯಾಯಾಲಯ 10 ದಿನಗಳ ಕಸ್ಟಡಿಗೆ ನೀಡಿದೆ. 538 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ದುಬೈ ಮತ್ತು ಯುಕೆ ಸೇರಿದಂತೆ ವಿದೇಶಗಳಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ.

ಅರ್ನ್ಸ್ಟ್ & ಯಂಗ್ ಕಂಪನಿಯ ಫೊರೆನ್ಸಿಕ್ ಆಡಿಟ್ ವರದಿ ಸೂಚಿಸಿದಂತೆ ನರೇಶ್ ಗೋಯಲ್ ಬ್ಯಾಂಕ್‌ನ ಸಾಲವನ್ನು ಅಕ್ರಮವಾಗಿ ಬೇರೆಡೆಗೆ ತಿರುಗಿಸಿದ್ದರಿಂದ ಕೆನರಾ ಬ್ಯಾಂಕ್‌ಗೆ 538.62 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಇಡಿ ಹೇಳಿದೆ. ಜೆಟ್ ಏರ್‌ವೇಸ್ ಸಹಭಾಗಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೆನರಾ ಬ್ಯಾಂಕ್ ಸಾಲಕ್ಕೆ ನಕಲಿ ವೆಚ್ಚಗಳನ್ನು ತೋರಿಸಿ ವಂಚಿಸಿರುವುದು ಕಂಡುಬಂದಿದೆ.

ಈ ವೆಚ್ಚಗಳು ನರೇಶ್ ಗೋಯಲ್, ಅವರ ಕುಟುಂಬ ಸದಸ್ಯರ ವೈಯಕ್ತಿಕ ವೆಚ್ಚಗಳು ಮತ್ತು ಪ್ರವರ್ತಕರ ವಿದೇಶಿ ಖಾತೆಗಳಿಗೆ ಜಮಾ ಮಾಡಲಾದ ಲೆಕ್ಕವಿಲ್ಲದ ವಹಿವಾಟುಗಳನ್ನು ಒಳಗೊಂಡಿವೆ. ಜೆಟ್ ಏರ್‌ವೇಸ್ ಲಿಮಿಟೆಡ್ ಜನರಲ್ ಸೆಲ್ಲಿಂಗ್ ಏಜೆಂಟ್ಸ್, ಕಮಿಷನ್ ರೂಪದಲ್ಲಿ ಹಣವನ್ನು ದುಬೈ, ಐರ್ಲೆಂಡ್ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನಲ್ಲಿರುವ ವಿದೇಶಿ ಕಂಪನಿಗಳಿಗೆ ತಿರುಗಿಸಿತು.

ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಸಲಹೆಗಾರರಿಗೆ ಹೆಚ್ಚಿನ ಸಂಬಳ, ಮನೆಗೆ ಪೀಠೋಪಕರಣಗಳು, ಉಡುಪುಗಳು ಮತ್ತು ಆಭರಣಗಳ ತೆಗೆದುಕೊಂಡಿರುವುದರ ಬಗ್ಗೆ ವಿಚಾರಣೆಯಲ್ಲಿ ತಿಳಿದಿದೆ. ಅರ್ನ್ಸ್ಟ್ ಅಂಡ್ ಯಂಗ್ ಆಡಿಟ್ ವರದಿಯನ್ನು ಪರಿಶೀಲಿಸಿದಾಗ, 2011-2012 ಮತ್ತು 2018-2019ರ ಅವಧಿಯಲ್ಲಿ ನರೇಶ್ ಗೋಯಲ್ ಅವರ ಪತ್ನಿ ಅನಿತಾ, ಮಗಳು ನಮ್ರತಾ ಮತ್ತು ಮಗ ನಿವಾನ್ ಅವರಿಗೆ ಜಿಐಎಲ್ ಖಾತೆಗಳಿಂದ 9.46 ಕೋಟಿರೂ. ಪಾವತಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!