RECIPE| ರುಚಿಯಾದ ಕ್ಯಾಬೇಜ್ ರವಾ ಉಪ್ಪಿಟ್ಟು ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಾಗ್ರಿಗಳು:

ರವೆ
ಸಾಸಿವೆ
ಜೀರಿಗೆ
ಉದ್ದಿನ ಬೇಳೆ
ಕಡಲೆ ಬೇಳೆ
ಒಣ ಮೆಣಸು
ಕರಿಬೇವಿನ ಎಲೆ
ಕ್ಯಾಬೇಜ್
ಟೊಮೆಟೊ
ಕ್ಯಾರೆಟ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಗೋಡಂಬಿ
ಎಣ್ಣೆ
ತುಪ್ಪ
ಉಪ್ಪು

ಮಾಡುವ ವಿಧಾನ:

* ಮೊದಲು ಬಾಣಲೆಯಲ್ಲಿ ರವೆಯನ್ನು ಫ್ರೈ ಮಾಡಿ ಪಕ್ಕಕ್ಕಿಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ, ನಂತರ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ, ಕರಿ ಬೇವಿನ ಎಲೆ, ಒಣ ಮೆಣಸು ಹಾಕಿ ಫ್ರೈ ಮಾಡಿ.
* ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ.
* ನಂತರ ಕತ್ತರಿಸಿದ ಕ್ಯಾಬೇಜ್, ಟೊಮೆಟೊ, ಕ್ಯಾರೆಟ್ ಹಾಕಿ ಫ್ರೈ ಮಾಡಿ.
* ಈಗ ಅದಕ್ಕೆ ಗೋಡಂಬಿ, ನೀರು, ಉಪ್ಪು ಸೇರಿಸಿ. * ನೀರು ಕುದಿ ಬರುವಾಗ ರವೆಯನ್ನು ನಿಧಾನವಾಗಿ ಹಾಕಿ ಬೇಯಿಸಿದರೆ ಕ್ಯಾಬೇಜ್ ರವೆ ಉಪ್ಪಿಟ್ಟು ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!